ನನ್ನ ಮತ ಮಾರಾಟಕ್ಕಿಲ್ಲ -ಮತದಾರ ಜಾಗೃತಿ ಆಂದೋಲನ

ಕಲಬುರಗಿ,ಜು.೧: ಹೈ.ಕ ಶಿಕ್ಷಣ ಸಂಸ್ಥೆಯ, ಎಚ್‌ಕೆಇ ,ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನನ್ನ ಮತ ಮಾರಾಟಕ್ಕಿಲ್ಲ -ಮತದಾರ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿಶ್ವನಾಥ್ ರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಸವರಾಜ ಮಠಪತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇವತ್ತು ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಿತಿಮೀರಿ ಹಣ ಹಂಚುತ್ತಿವೆ.ಇದರಿAದ ಮತದಾರರು ಜಾಗೃತರಾಗಬೇಕು. ನಮ್ಮ ಒಂದು ಮತ ನಮ್ಮ ದೇಶವನ್ನು ಸಮೃದ್ಧತೆಯಡೆಗೆ ಒಯ್ಯುವುದಲ್ಲದೆ ನಮ್ಮ ಜೀವನವನ್ನು ಸುಖಮಯವಾಗಿ ಮಾಡುವುದು.ಪ್ರತಿಯೊಬ್ಬ ಮತದಾರರು ಚುನಾವಣೆಯಲ್ಲಿ ಹಣ ಹಂಚುವವರನ್ನು ಧಿಕ್ಕರಿಸಬೇಕು.ಚುನಾವಣೆಯಲ್ಲಿ ಹಣ ಹಂಚುತ್ತಿರುವುದೇ ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ರಮೇಶ ಆರ್ ದುತ್ತರಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಉಷಾದೇವಿ ಪಾಟೀಲ ಮಾತನಾಡುತ್ತಾ ವಿದ್ಯಾರ್ಥಿಗಳು ಪ್ರತಿಯೊಬ್ಬರು ತಪ್ಪದೆ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಬೇಕು.ಕ್ರಿಮಿನಲ್ ಆರೋಪ ಹಿನ್ನೆಲೆ ಉಳ್ಳವರಿಗೆ ಮತ ಹಾಕಬಾರದು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ನಮಗೆ ಸರಿ ಎನಿಸದೆ ಇದ್ದ ಪಕ್ಷದಲ್ಲಿ ಕೊನೆಗೆ ನೋಟಾಕ್ಕಾದರೂ ಮತ ಹಾಕುವ ಮುಖಾಂತರಮತದಾನದಲ್ಲಿ ಭಾಗಿಯಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅನುಸೂಯಾ ಜಿ .ಜಬಿಯಾ ಅಕ್ತರ್, ಶಿಲ್ಪಕಲಾ. ಬಿ, ರಾಜಶ್ರೀ, ಶುಭಾ ,ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಿದ್ದಮ್ಮ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಕ್ಷತಾ ಪ್ರಾರ್ಥನೆ ಗೀತೆ ಹಾಡಿದರು. ನಾಜಿಯಾ ಸ್ವಾಗತಿಸಿ,ಸಮಿನಾ ವಂದನಾರ್ಪಣೆ ಮಾಡಿದರು .ಕೊನೆಯಲ್ಲಿ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.