Home Lead News ಯುದ್ಧಾಂತ್ಯಕ್ಕೆ ೧೫ ಅಂಶ

ಯುದ್ಧಾಂತ್ಯಕ್ಕೆ ೧೫ ಅಂಶ

ವಾಷಿಂಗ್ಟನ್, ಮಾ.೨೫- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಇರಾನ್‌ನೊಂದಿಗೆ ೧೫ ಅಂಶಗಳ ಶಾಂತಿ ಯೋಜನೆ ಪ್ರಸ್ತಾಪ ಮಾಡಿದ್ದು ಒಂದು ತಿಂಗಳ ಕದನ ವಿರಾಮ ಪ್ರಕಟಿಸಿದ್ದು ಇರಾನ್ ಕೂಡ ಪ್ರಮುಖ ಷರತ್ತು ಮುಂದಿಟ್ಟಿದೆ.


ಮಧ್ಯಪ್ರಾಚ್ಯ ಸಂಘರ್ಷ ಕೊನೆಗೊಳಿಸಲು ಅಮೆರಿಕ ಇರಾನ್‌ಗೆ ೧೫ ಅಂಶಗಳ ಪ್ರಸ್ತಾವನೆ ಮುಂದಿಟ್ಟಿದೆ, ಇದರಲ್ಲಿ ಇರಾನ್ ಪರಮಾಣು ಕಾರ್ಯಕ್ರಮದ ಮೇಲೆ ಕಠಿಣ ನಿರ್ಬಂಧ, ನಕಲಿ ಯುದ್ಧ ಗುಂಪುಗಳಿಗೆ ಬೆಂಬಲ ನೀಡುವುದನ್ನು ಕೊನೆಗೊಳಿಸುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು ಮುಂತಾದ ಷರತ್ತುಗಳು ಸೇರಿವೆ.


ಮಾತುಕತೆಗೆ ಪೂರಕವಾಗಿ ಅಮೆರಿಕ ಒಂದು ತಿಂಗಳ ಅವಧಿಯ ಕದನ ವಿರಾಮ ಘೋಷಿಸಲಾಗುವುದು. ಬೇಡಿಕೆಗಳ ವ್ಯಾಪಕ ಸ್ವರೂಪ ಮತ್ತು ಇದೇ ರೀತಿಯ ಪ್ರಸ್ತಾಪಗಳಿಗೆ ಇರಾನ್‌ನ ಸ್ಥಿರ ಪ್ರತಿರೋಧವನ್ನು ಗಮನಿಸಿದರೆ, ಇರಾನ್ ಯೋಜನೆ ತಿರಸ್ಕರಿಸಿದೆ.


ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜತೆಗೂಡಿ ನಡೆಸುತ್ತಿರುವ ಸಂಘರ್ಷ ೨೬ನೇ ದಿನಕ್ಕೆ ಕಾಲಿಟ್ಟಿದ್ದು ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ ಎನ್ನುವ ಮಾತುಗಳ ನಡುವೆಯೇ ಅಮೆರಿಕ ೧೫ ಅಂಶಗಳ ಶಾಂತಿ ಯೋಜನೆ ಪ್ರಸ್ತಾಪ ಮುಂದಿಟ್ಟಿದೆ,


ಅಮೆರಿಕ ಮುಂದಿಟ್ಟಿರುವ ಶಾಂತಿ ಪ್ರಸ್ತಾಪಗಳು ಯಾವುದು, ಇರಾನ್ ಪ್ರಸ್ತಾಪಗಳನ್ನು ಸ್ವೀಕರಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಇರಾನ್ ಪರಮಾಣು ಕಾರ್ಯಕ್ರಮ ಮತ್ತು ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದರ ಮೇಲೆ ಕಠಿಣ ಮಿತಿ ಒಳಗೊಂಡಿದೆ ಎಂದು ತಿಳಿಸಲಾಗಿದೆ.


ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿ ಮಧ್ಯ ಪ್ರಾಚ್ಯ ಸಂಘರ್ಷ ಕೊನೆಗೊಳಿಸಲು ಮಾತುಕತೆ ನಡೆಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್‌ನ ಒಪ್ಪಿಗೆಗೆ ಒಳಪಟ್ಟು, ನಡೆಯುತ್ತಿರುವ ಸಂಘರ್ಷದ ಸಮಗ್ರ ಇತ್ಯರ್ಥಕ್ಕಾಗಿ ಅರ್ಥಪೂರ್ಣ ಮತ್ತು ನಿರ್ಣಾಯಕ ಮಾತುಕತೆ ಸುಗಮಗೊಳಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಕೂಡ ಪ್ರತಿಕ್ರಿಯಿಸಿ ಅಮೆರಿಕ ಯುದ್ಧವನ್ನು “ಈಗಾಗಲೇ ಗೆದ್ದಿದೆ” ಎಂದು ಮಾಹಿತಿ ನೀಡಿದ್ದು
ಅಮೆರಿಕದ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಎಲ್ಲರೂ ಮಾತುಕತೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ


ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ, ಅದಕ್ಕೆ ಅಮೆರಿಕ ಅವಕಾಶವನ್ನೂ ಮಾಡಿಕೊಡುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ
ಇರಾನ್‌ಗೆ ಶಾಂತಿ ಯೋಜನೆ ಪ್ರಸ್ತಾಪ ಕಳುಹಿಸಿದ ನಂತರ ತೈಲ ಬೆಲೆಗಳು ಶೇಕಡಾ ೫ ಕ್ಕಿಂತ ಹೆಚ್ಚು ಕುಸಿದವು. ಬ್ರೆಂಟ್ ಕಚ್ಚಾ ತೈಲ ಸುಮಾರು ಆರು ಪ್ರತಿಶತದಷ್ಟು ಕುಸಿದಿದೆ. ಹಿಂದಿನ ದಿನ ಪ್ರತಿ ಬ್ಯಾರೆಲ್‌ಗೆ ೧೦೩ ಡಾಲರ್‍ಗಿಂತ ಹೆಚ್ಚಾಗಿತ್ತು ಇದೀಗ ಕುಸಿದೆ.

ಅಮೆರಿಕಕ್ಕೆ ಇರಾನ್ ಷರತ್ತು


ಅಮೆರಿಕ ಮುಂದಿಟ್ಟಿರುವ ೧೫ ಶಾಂತಿ ಒಪ್ಪಂದಗಳಿಗೆ ಪ್ರತಿಯಾಗಿ ಇರಾನ್ ಕೂಡ ಹಲವು ಷರತ್ತು ಮುಂದಿಟ್ಟಿದ್ದು ಅದರಲ್ಲಿ ಪ್ರಮುಖವಾಗಿ ಅಮೆರಿಕದ ನೆಲೆಗಳ ಸ್ಥಗಿತ, ಹಾರ್ಮುಜ್ ಸಾರಿಗೆ ಶುಲ್ಕ: ಕದನ ವಿರಾಮಕ್ಕೆ ಇರಾನ್ ಕಠಿಣ ಷರತ್ತು ಸೇರಿವೆ.


ಅಮೆರಿಕದ ನೆಲೆಗಳನ್ನು ಮುಚ್ಚುವುದರಿಂದ ಹಿಡಿದು ಪ್ರಮುಖ ಜಾಗತಿಕ ತೈಲ ಮಾರ್ಗವನ್ನು ನಿಯಂತ್ರಿಸುವವರೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ನ ಬೇಡಿಕೆ ಮುಂದಿಟ್ಟಿದೆ.


ಇರಾನ್ ಕೊಲ್ಲಿಯಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವುದರಿಂದ ಹಿಡಿದು ನಿರ್ಬಂಧಗಳನ್ನು ಕೊನೆಗೊಳಿಸುವುದು ಮತ್ತು ಪ್ರಮುಖ ಹಡಗು ಮಾರ್ಗದ ಮೇಲೆ ನಿಯಂತ್ರಣ ಸಾಧಿಸುವವರೆಗೆ ವ್ಯಾಪಕ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ವರದಿಯಾಗಿದೆ.


ಮಾತುಕತೆಗಳ ಬಗ್ಗೆ ಅಮೆರಿಕದ ಪ್ರಸ್ತಾಪವನ್ನು ಇರಾನ್ ಮುಂದಿಟ್ಟಿದೆ. ಎರಡೂ ಕಡೆಯ ನಡುವೆ ಪರೋಕ್ಷ ಮಾತುಕತೆಗಳು ರೂಪುಗೊಂಡರೂ ಸಹ, ಕದನ ವಿರಾಮ ಒಪ್ಪಂದದ ಕುರಿತು ಮಾತುಕತೆಗಳನ್ನು ಮರುಪ್ರಾರಂಭಿಸಲು ಇರುವ ನಿರ್ಬಂಧ ಹೆಚ್ಚಾಗಿದೆ ಎಂದು ಇರಾನ್ ಹೇಳಿದೆ.


ಕೊಲ್ಲಿಯಲ್ಲಿರುವ ಎಲ್ಲಾ ಅಮೆರಿಕನ್ ನೆಲೆಗಳನ್ನು ಮುಚ್ಚುವುದು, ಯುದ್ಧಕಾಲದ ಹಾನಿಗೆ ಆರ್ಥಿಕ ಪರಿಹಾರ ಮತ್ತು ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್‌ನ ಅಭಿಯಾನವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದೆ.

ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಇರಾನ್ ಶುಲ್ಕವನ್ನು ಸಂಗ್ರಹಿಸಲು ಅನುವು ಮಾಡಿಕೊಡುವಂತೆ ಬೇಡಿಕೆ ಮುಂದಿಟ್ಟಿದೆ.

ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಇರಾನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. “ನೀವು ನಿಮ್ಮೊಳಗೇ ಮಾತುಕತೆ ನಡೆಸುತ್ತಿದ್ದೀರಿ” ಎಂದು ಇರಾನ್ ಸಶಸ್ತ್ರ ಪಡೆಗಳ ವಕ್ತಾರ ತಿರುಗೇಟು ನೀಡಿದ್ದಾರೆ.


ಇರಾನ್‌ನ ಖಾತಮ್ ಅಲ್-ಅಂಬಿಯಾ ಮುಖ್ಯಾಲಯದ ವಕ್ತಾರರು ಅಮೆರಿಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ನೀವು ಹೆಮ್ಮೆಪಡುತ್ತಿದ್ದ ತಂತ್ರಶಕ್ತಿಯು ಈಗ ಸೋಲಾಗಿ ಪರಿಣಮಿಸಿದೆ. ಅದನ್ನು ಒಪ್ಪಂದ ಎಂದು ಕರೆಯಬೇಡಿ” ಎಂದು ಹೇಳಿದ್ದಾರೆ.


ಪ್ರಪಂಚದಲ್ಲಿ ಈಗ ಸತ್ಯ ಮತ್ತು ಅಸತ್ಯ ಎಂಬ ಎರಡು ಶಕ್ತಿಗಳು ಮಾತ್ರ ಇವೆ. ನಿಮ್ಮ ಮಾಧ್ಯಮ ಪ್ರಚಾರದಿಂದ ಯಾರನ್ನೂ ಮರುಳಾಗಿಸಲು ಸಾಧ್ಯವಿಲ್ಲ. ನಿಮ್ಮ ಒಳಗಿನ ಸಂಘರ್ಷಗಳ ಮಟ್ಟವೇ ನೀವು ನಿಮ್ಮೊಳಗೇ ಮಾತುಕತೆ ನಡೆಸುವ ಪರಿಸ್ಥಿತಿಗೆ ತಲುಪಿದೆ” ಎಂದು ಅವರು ವ್ಯಂಗ್ಯವಾಡಿದರು.ಇದಲ್ಲದೆ, ಅಮೆರಿಕಾ-ಇಸ್ರೇಲ್ ಪಡೆಗಳೊಂದಿಗೆ ಯಾವುದೇ ರೀತಿಯ ಒಪ್ಪಂದಕ್ಕೂ ಇರಾನ್ ಸಮ್ಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ನಮ್ಮ ಇಚ್ಛೆಯಿಲ್ಲದೆ ಈ ಪ್ರದೇಶದಲ್ಲಿ ಶಾಂತಿ ಮರಳುವುದಿಲ್ಲ. ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಯೋಚನೆ ಸಂಪೂರ್ಣವಾಗಿ ಅಳಿದುಹೋಗಿದಾಗ ಮಾತ್ರ ಸ್ಥಿರತೆ ಸಾಧ್ಯ” ಎಂದು ಹೇಳಿದರು.


ಇದಕ್ಕೂ ಮೊದಲು, ಅಧ್ಯಕ್ಷ ಆoಟಿಚಿಟಜ ಖಿಡಿumಠಿ ಅವರು ಇರಾನ್ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿ, ಯುದ್ಧ ಅಂತ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. “ನಾವು ಈಗ ಮಾತುಕತೆಯಲ್ಲಿದ್ದೇವೆ. ಇರಾನ್ ಒಪ್ಪಂದ ಮಾಡಲು ಬಯಸುತ್ತದೆ. ಅವರ ನೌಕಾಪಡೆ, ವಾಯುಪಡೆ ಎಲ್ಲವೂ ನಾಶವಾಗಿದೆ” ಎಂದು ಅವರು ಹೇಳಿದ್ದರು.