
ಕಲಬುರಗಿ: ನಗರದ ಸೇಡಂ ರಸ್ತೆ ಸ್ವಾಭಿಮಾನ ಸ್ವದೇಶಿ ಮಾರ್ಟ್‍ನಲ್ಲಿ ಇಂದು ಸ್ವಾಭಿಮಾನ ಸ್ವದೇಶಿ 11 ನೇ ವಾರ್ಷಿಕೋತ್ಸವದ ಅಂಗವಾಗಿ ಎರಡು ದಿನಗಳ ಸ್ವದೇಶಿ ಉತ್ಸವ ಪ್ರಾರಂಭವಾಯಿತು.ಪ್ರಾರಂಭೋತ್ಸವದ ವೇದಿಕೆಯಲ್ಲಿ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪಾ, ಸಾವಯವ ಪದ್ಧತಿಯ ಪ್ರಗತಿಪರ ರೈತ ಗೌರಿಶಂಕರ ಕರೋಶಿ ಧಾರವಾಡ,ಸುನೀಲಕುಮಾರ ಅವರು ಉಪಸ್ಥಿತರಿದ್ದರು.























