ಬಾದಾಮಿ ತಾಲೂಕಿಗೆ ನೂತನ ತಹಶೀಲ್ದಾರರಾಗಿ ಈಚೆಗೆ ಕರ್ತವ್ಯಕ್ಕೆ ಹಾಜರಾದ ಕಾವ್ಯಶ್ರೀ ಹೆಚ್ ರವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಶಿದ್ದಲಿಂಗಪ್ಪನವರ ಅವರ ನೇತೃತ್ವದಲ್ಲಿ ಹಾರ ಹಾಕಿ ಸ್ವಾಗತಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯ ಅವಿನಾಶ ಮೇಟಿ, ಕಾರ್ಯದರ್ಶಿ ಆರ್.ಟಿ.ಪಟ್ಟಣಶೆಟ್ಟಿ, ಖಜಾಂಚಿ ಉಮೇಶ ಜಾಧವ ಹಾಗೂ ಗುಳೇದಗುಡ್ಡ ನೌಕರರ ಸಂಘದ ಕಾರ್ಯದರ್ಶಿ ನಾಗರಾಜ ಹೆಚ್ ಸೇರಿದಂತೆ ತಾಲೂಕಿನ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.