
ಕಲಬುರಗಿ: ವಕ್ಫ್ ಕಾಯಿದೆ ತಿದ್ದುಪಡಿಗೆ ವಿರೋಧಿಸಿ, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ- ಕುಲ್ ಜಮಾತಿ ಇತ್ತೆಹಾದ್ ಇ ಮಿಲ್ಲತ್ ಗುಲಬರ್ಗ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಮೊಹಮ್ಮದ್ ಅಸ್ಗರ್ ಚುಲಬುಲ್,ಮುಸ್ತಾಕ್ ಇಂಜಿನಿಯರ್, ಮುಬೀನ್ ಅಹ್ಮದ್, ರಿಜ್ವಾನೂರ್ ರೆಹಮಾನ್ ಸಿದ್ದಕಿ, ಜಬ್ಬಾರ್ ಗೋಳಾ, ಲಕ್ಷ್ಮೀಕಾಂತ ಹುಬ್ಳಿ,ನಜೀರ್ ಅಹ್ಮದ್ ಮುತವಲ್ಲಿ,ಸಂಜಯ್ ಮಾಕಲ್,ಜಾಕೀರ್ ಹುಸೇನ್,ಶರೀಫ್ ಮಜಾರಿ ಸೇರಿದಂತೆ ಹಲವರಿದ್ದರು.