
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.29: ನಾಡು ಕಂಡಂತಹ ಅಪ್ರತಿಮ ಹೋರಾಟಗಾರ, ನಾಡು ಕಂಡ ರೈತ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಅವರು 50 ವರ್ಷ ಪೂರೈಕೆ ಮಾಡಿದ್ದಾರೆ. ಈ ಹಿನ್ನೆಲೆ ಅವರಿಗೆ
ಚಿತ್ರದುರ್ಗದಲ್ಲಿ ಮುಂದಿನ ತಿಂಗಳು 9 ರಂದು ಅಭಿನಂದನಾ ಸಮಾರಂಭ ಅಭಿನಂದನೋತ್ಸವ ಮಾಡುತ್ತೇವೆ. ಗೃಹ ಸಚಿವ ಅಮಿತ್ ಷಾ ಆಗಮಿಸ್ತಾರೆ, ನಾಡಿನ ಜಗದ್ಗುರುಗಳು ಭಾಗಿಯಾಗ್ತಾರೆಂದು ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಅವರು ಇಂದು ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ. ಈ ಸಮಾರಂಭಕ್ಕೆ
ರಾಜ್ಯದ ಮೂಲೆ- ಮೂಲೆಗಳಿಂದ 10 ಲಕ್ಷ ಅಭಿಮಾನಿಗಳು ಸೇರ್ತಾರೆ. 8 ಕ್ಕೆ ಪುರ ಪ್ರವೇಶ, ಮಾಡ್ತಾರೆ, 9 ರ ಕಾರ್ಯಕ್ರಮ ಅದ್ದೂರಿಯಾಗಲಿದೆಂದರು.
ಚಿತ್ರದುರ್ಗದಲ್ಲಿ ಮದಕರಿ ನಾಯಕ ಪುತ್ಥಳಿ ಥೀಮ್ ಪಾರ್ಕ್ ಅಪೂರ್ಣ ವಿಚಾರದಲ್ಲಿ ಅಮಿತ್ ಷಾ ಗೋ ಬ್ಯಾಕ್ ಚಳುವಳಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ.
ಈ ಹಿಂದೆ ಭರವಸೆ ಕೊಟ್ಟಿದ್ವಿ, ತಾವು ಗಮನಕ್ಕೆ ತಂದಿದಿರಿ, ನಾನು ಅಮಿತ್ ಷಾ ಅವರ ಗಮನಕ್ಕೆ ತರ್ತೇನೆ ಎಂದರು.
ಭರವಸೆಗಳು ಕೊಟ್ಟಿದ್ದನ್ನು ಈಡೇರಿಸಿಲ್ಲ, ಹಂಗೆ ಲೆಕ್ಕ ನೋಡಿದ್ರೆ ಕಾಂಗ್ರೆಸ್ ಭೂಮಿ ಮೇಲೆ ಇರ್ತಿರ್ಲಿಲ್ಲ ಎಂದರು.
ಕರ್ನಾಟಕ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ನಮ್ಮದು ಹೈಕಮಾಂಡ್ ಏನು ಹೇಳೋತ್ತೋ, ಅದನ್ನು ಮಾಡ್ತೆವೆ
ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬದ್ಧರಿದ್ದೇವೆ ಎಂದರು.
ರಾಜ್ಯದಲ್ಲಿ ಕುಡಿವ ನೀರು ಸೇರಿದಂತೆ ಜ್ವಲಂತ ಸಮಸ್ಯೆಗಳು ಇವೆ ಆದರೂ, ಕಾಂಗ್ರೆಸ್ ನವರುದೆಹಲಿಗೆ ದಂಡಯಾತ್ರೆಯಲ್ಲಿ ಬ್ಯೂಸಿ ಇದ್ದಾರೆ
ತಮ್ಮ ಖುರ್ಚಿ ಉಳಿಸಿಕೊಳ್ಳೊಕೆ ಸಿಎಂ. ಸಚಿವರು ಪ್ರಯತ್ನ ಮಾಡುತ್ತಿದ್ದಾರೆಂದರು.
ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಬಿನ್ನಮತಗಳು ಹೆಚ್ಚಾಗುತ್ತಿವೆ ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಗಟ್ಟಿ ಮಾಡಿಕೊಳ್ಳೊಕೆ ಅಹಿಂದ ನಾಯಕ ಅಂತ ಹೇಳುತ್ತಾರೆ. ದೆಹಲಿಗೆ ಹೋಗಿ ಅಹಿಂದ ಸಮಾವೇಶ ಮಾಡುತ್ತೆವೆ ಅಂತಾರೆ. ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ. ಸಿದ್ದರಾಮಯ್ಯ ಅವರ ಖುರ್ಚಿಗೆ ಯಾವಾಗ ಕಂಟಕ ಬರುತ್ತೊ ಆಗ ಅಹಿಂದ ಸಮಾವೇಶ ನೆನಪಾಗುತ್ತೆ. ಸಿಎಂ ಸಿದ್ದರಾಮಯ್ಯ ಏಕ ದಿನ್ಕಾ, ದೋ ದಿನ್ಕಾ ಸಿಎಂ ಆಗಿದ್ದಾರೆಂದರು.
@12bc = ಕಾಂಗ್ರೆಸ್ ಭಷ್ಮವಾಗುತ್ತೆ – ಬಿ. ಶ್ರೀರಾಮುಲು
ಈ ವೇಳೆ ಮಾತನಾಡಿದ ಬಿ.ಶ್ರೀರಾಮುಲು ಜನರ ಕೋಪಕ್ಕೆ ಕಾಂಗ್ರೆಸ್ ಭಷ್ಮವಾಗುತ್ತೆ ಬಳ್ಳಾರಿಯಲ್ಲಿ ಯಾವುದೇ ಅನುಮತಿಯಿಲ್ಲದೆ ಗಿಡಮರಗಳನ್ನ ಕಡಿದು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತ ಹದಗೆಟ್ಟು ಹೋಗಿದೆ. ಈ ಕುರಿತಂತೆ ನಾನು ಪ್ರವೇಟ್ ಕೇಸ್ ನೀಡುತ್ತೆನೆ
ಮೀಸಲಾತಿ ವಿಚಾರವಾಗಿ ಅನ್ಯಾಯವಾಗಿದೆ. ಮೀಸಲಾತಿ ವಿಚಾರಕ್ಕೆ ಎಸ್ಸಿ ಎಸ್ಟಿ ಜನಾಂಗಕ್ಕೆ ಮೋಸ ಮಾಡಲಾಗಿದೆ. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದವರು ನಿಜ ಹೇಳಬೇಕು. ಸಣ್ಣ ಖರ್ಗೆ ಮೀಸಲಾತಿ ಸಕ್ಸಸ್ ಆಗಿದೆ ಅಂತಾ ಸಿಹಿ ಹಂಚುತ್ತಾರೆಂದರು
ನಂತರ ಚಿತ್ರದುರ್ಗದಲ್ಲಿ ನಡೆಯಲಿರೋ ಯಡಿಯೂರೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ, ವಿಜಯನಗರ, ಬಳ್ಳಾರಿ, ಕೊಪ್ಪಳ ಮೂರು ಜಿಲ್ಲೆಗಳ ಪದಾಧಿಕಾರಿಗಳು ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಯ್ತು.
ಬಿಜೆಪಿ ಪಕ್ಷದ ಹಾಲಿ, ಮಾಜಿ ಶಾಸಕರು, ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು.
ಸಂಸದ ಗೋವಿಂದ ಕಾರಜೋಳ, ಎಂಎಲ್ ಸಿ. ರವಿಕುಮಾರ್, ಹೂವಿನ ಹಡಗಲಿ ಶಾಸಕ ಕೃಷ್ಣನಾಯಕ್, ಮಾಜಿ ಸಚಿವರಾದ ಬಿಎಸ್ ಆನಂದ್ ಸಿಂಗ್, ಶ್ರೀ ರಾಮುಲು, ಮಾಜಿ ಶಾಸಕರಾದ ಪಿ. ರಾಜೀವ್, ಬಸವರಾಜ್ ದಡೆಸೂಗೂರ್ ಸಾಥ್ ನೀಡಿದ್ದರು

























