ಬೇಕಾಗುವ ಸಾಮಗ್ರಿಗಳು :
- ಸುರಮೈ ಫಿಶ್ ಅರ್ಧ ಕೆ.ಜಿ
- ಕಡಲೆಹಿಟ್ಟು ೩ ಚಮಚ
- ಗರಂ ಮಸಾಲ ೧ ಟೀ ಸ್ಪೂನ್
- ಚಾಟ್ ಮಸಾಲ ಕಾಲು ಟೀ ಸ್ಪೂನ್
- ಜೀರಿಗೆ ಪುಡಿ ಕಾಲು ಚಮಚ
- ಅಚ್ಚಖಾರದಪುಡಿ ಒಂದೂವರೆ ಚಮಚ
- ಓಂಕಾಳು ೧ ಚಮಚ
- ಅರಿಶಿನ ೧ ಚಮಚ
- ಮೊಸರು ೩ ಚಮಚ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ ೧ ಚಮಚ
- ಹಸಿರುಮೆಣಸಿನಕಾಯಿ ಪೇಸ್ಟ್ ೧ ಚಮಚ
- ಈರುಳ್ಳಿ ೧ ದೊಡ್ಡದು
- ದಪ್ಪಮೆಣಸಿನಕಾಯಿ ೧
- ಟೊಮೊಟೊ ೧
- ನಿಂಬೆರಸ ೧ ಚಮಚ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ೫೦
- ನೀರು ೧೦೦ ೨
ಮಾಡುವ ವಿಧಾನ :ಬೌಲ್‌ಗೆ ನಿಂಬೆರಸ, ಮೊಸರು, ಅರಿಶಿನಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಪೇಸ್ಟ್, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಚಾಟ್ ಮಸಾಲ, ೨ ಸ್ಪೂನ್ ಎಣ್ಣೆ, ಓಂಕಾಳು, ಕಡಲೆಹಿಟ್ಟು, ಉಪ್ಪನ್ನು ಹಾಕಿ. ಇದಕ್ಕೆ ಕ್ಯೂಬ್ ತರಹ ಕಟ್ ಮಾಡಿದ ದಪ್ಪ ಮೆಣಸಿನಕಾಯಿ, ಟೊಮೊಟೊ ಪೀಸುಗಳನ್ನು ಸೇರಿಸಿ. ಈ ಮಿಶ್ರಣಕ್ಕೆ ಮೀಡಿಯಂ ಸೈಜ್‌ನಲ್ಲಿ ಕಟ್ ಮಾಡಿದ ಮೀನಿನ ಪೀಸುಗಳನ್ನು ಹಾಕಿ. ಚೆನ್ನಾಗಿ ಕಲಸಿ, ಅರ್ಧ ಗಂಟೆ ನೆನೆಸಿಡಿ. ಬಾರ್ಬಿಕ್ಯೂ ಸ್ಟಿಕ್‌ಗೆ ರೌಂಡಾಗಿ ಕಟ್ ಮಾಡಿರುವ ಕಲಸಿದ ಟೊಮೊಟೊ, ದಪ್ಪ ಮೆಣಸಿನಕಾಯಿ ಮೀನಿನ ಪೀಸ್‌ಗಳನ್ನು ಒಂದರಮೇಲೊಂದರಂತೆ, ಸಿಕ್ಕಿಸಿ, ಕಡಾಯಿಗೆ ಎಣ್ಣೆ ಹಾಕಿ ಸ್ಟಿಕ್‌ನಲ್ಲಿ ಜೋಡಿಸಿರುವುದನ್ನು ಚೆನ್ನಾಗಿ ಶ್ಯಾಲೂ ಪ್ರೈ ಮಾಡಿದರೆ, ಫಿಶ್ ಟಿಕ್ಕಾ ತಿನ್ನಲು ಸಿದ್ಧ.