
ಡೆಹರಾಡೂನ್, ಜೂ.೧೫- ಉತ್ತರಖಾಂಡದ ಕೇದಾರನಾಥ-ಗೌರಿಕುಂಡ್ ನಡುವಿನ ಹೆಲಿಕಾಪ್ಟರ್ ಅಪಘಾತದಲ್ಲಿ ೭ ಮಂದಿ ಸಾವಲ್ಲಿದ ಬೆನ್ನಲ್ಲೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದರು.
ಕಳೆದ ೬ ವಾರದಲ್ಲಿ ೫ ನೇ ಬಾರಿಗೆ ಹೆಲಿಕ್ಯಾಪ್ಟರ್ ದುರಂತ ಇದಾಗಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಹೆಲಿಕ್ಯಾಪ್ಟರ್ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ಧಾರೆ
ಈ ವೇಳೆ ರಾಜ್ಯ ಮುಖ್ಯ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಕಾರ್ಯದರ್ಶಿ, ಯುಸಿಡಿಎ ಸಿಇಒ, ಗರ್ವಾಲ್ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಸಭೆಯಲ್ಲಿ ಉಪಸ್ಥಿತರಿದ್ದರು.
ಉತ್ತರಖಾಂಡದಲ್ಲಿ ಪ್ರಸಿದ್ದ ಯಾತ್ರಾ ಸ್ಥಳಗಳಿಗೆ ಭಕ್ತಾಧಿಗಳನ್ನು ಕರೆದೊಯ್ಯಲು ಹೆಲಿಕ್ಯಾಪ್ಟರ್ ಸೇವೆ ಇದ್ದು ಹವಾಮಾನ ವೈಪರಿತ್ಯ ಮತ್ತು ಹೆಲಿಕ್ಯಾಪ್ಟರ್ ತಾಂತ್ರಿಕ ದೋಷದಿಂದ ಹೆಲಿಕ್ಯಾಪ್ಟರ್ ಅಪಘಾತ ಸಂಭವಿಸುತ್ತಿವೆ.
ಭವಿಷ್ಯದಲ್ಲಿ ಅಪಘಾತ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಗಿದೆ, ಈ ನಿಟ್ಟಿನಲ್ಲಿ ಮುಂದೆ ಅನಾಹುತ ಆಗದಂತೆ ನೋಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ