
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.14: ಅಡುಗೆ ತಯಾರಿಕೆಯ ಕಮರ್ಷಿಯಲ್ ಸಿಲಿಂಡರ್ ಮಾತ್ರವಲ್ಲದೇ ನಗರದಲ್ಲಿ ಆಟೋ ಎಲ್ಪಿಜಿ ಗ್ಯಾಸ್ ಸಹ ಖಾಲಿ ಖಾಲಿ.ನಿಗಧಿಯಾದ ಸ್ಟಾಕ್ ಬಾರದ ಪರಿಣಾಮ ನಗರದ ಆರು ಅಟೋ ಎಲ್ಪಿಜಿ ಸೆಂಟರ್ ಗಳು ಬಂದಾಗಿವೆ.
ಈ ಮೊದಲು 63 ರೂಪಾಯಿಗೆ ಲೀಟರ್ ಇದ್ದ ದರ ಈಗ 75 ರೂಪಾಯಿ ಅಂದ್ರೇ 12 ರೂಪಾಯಿ ಹೆಚ್ಚಾಗಿದೆ.
ಆಟೋದವರು ಬಂಕ್ ಬಳಿ ಬರುತ್ತಿದ್ದಾರೆ ಅದ್ರೇ ಸ್ಟಾಕ್ ಇಲ್ಲವೆಂದು ಬೇಸರಿಂದ ಹಿಂದಕ್ಕೆ ಹೋಗ್ತಿದ್ದಾರೆ. ಈಗಾಗಲೇ ಬಳ್ಳಾರಿ ಬರೋ ಸಪ್ಲೈ ನಲ್ಲಿ ಆರ್ಧಕ್ಕರ್ಧ ಕಡಿಮೆಯಾಗಿದೆಮ ಇದು ಹೀಗೆಯೇ ಮುಂದುವರೆದ್ರೇ ಆಟೋಗಳು ನಿಲ್ಲುಸುವ ಸ್ಥಿತಿ ಬರಲಿದೆ. ಇನ್ನೂ ಸ್ಟಾಕ್ ಯಾವಾಗ ಬರುತ್ತದೆ ಅನ್ನೋ ಬಗ್ಗೆ ಡೀಲರ್ ಗಳಿಗೇ ಮಾಹಿತಿಇಲ್ಲವಾಗಿದೆ.






















