Home ಜಿಲ್ಲೆ ಗ್ಯಾಸ್ ಸಿಲಿಂಡರ್ ವಿತರಣೆ ಪರಿಶೀಲಿಸಿದ ಮೇಯರ್

ಗ್ಯಾಸ್ ಸಿಲಿಂಡರ್ ವಿತರಣೆ ಪರಿಶೀಲಿಸಿದ ಮೇಯರ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.14: ಕೊಲ್ಲಿ ಯುದ್ದದಿಂದ ಉಂಟಾಗಿರುವ ಅಡುಗೆ ಅನಿಲ(ಗ್ಯಾಸ್) ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಯಿಂದಾಗಿ ಇಂದು ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ನ ಲಕ್ಷ್ಮೀನರಸಿಂಹ ಏಜೆನ್ಸಿಗೆ ಹಾಗೂ ಪಾರ್ವತಿ ನಗರದಲ್ಲಿರುವ ಹೆಚ್. ಪಿ. ಗ್ಯಾಸ್ ವೆಂಕಟೇಶ್ವರ ಗ್ಯಾಸ್ ಏಜೆನ್ಸಿಗೆ ಮೇಯರ್ ಪಿ.ಗಾದೆಪ್ಪ, ಪಾಲಿಕೆ ಆಯುಕ್ತ ಮಂಜುನಾಥ ಅವರು ದಿಢೀರನೇ ಭೇಟಿ ನೀಡಿ ಸ್ಟಾಕ್ ಚೆಕ್ ಮಾಡಿದರು.

ಬಳ್ಳಾರಿಯ ಸಾರ್ವಜನಿಕರಿಗೆ ಗ್ಯಾಸ್ ನ ಯಾವುದೇ ತೊಂದರೆ ಆಗದಂತೆ ಹಾಗೂ ಬುಕ್ಕಿಂಗ್ ಮಾಡಲು ಹಾಗೂ ಸರ್ಕಾರಿ ವಸತಿ ನಿಲಯಗಳಿಗೆ. ಸಿಲೆಂಡರ್ ಗಳನ್ನು ನೀಡಲು ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಹಾಗೂ ಹೋಟೆಲಗಳಿಗೆ ಗೃಹಬಳಿಕೆಯ ಸಿಲಿಂಡರ್ ಗಳನ್ನು ಕಾಳ ಸಂತೆಯಲ್ಲಿ ಮಾರಬಾರದೆಂದು. ಗಾದೆಪ್ಪನವರು ಹಾಗೂ ಪಾಲಿಕೆಯ ಕಮಿಷನರ್ ಸೂಚಿಸಿದ್ದಾರೆ.

ಹೋಟೆಲ್ಗಳಲ್ಲಿ ಕಮರ್ಷಿಯಲ್ ಸಿಲೆಂಡರ ಬಿಟ್ಟು ಗೃಹಬಳಿಕೆಯ ಸಿಲಿಂಡರ್ ಬಳಸಿದರೆ ಅವರ ಹೋಟೆಲ್ ಲೈಸೆನ್ಸ್ ಕ್ಯಾನ್ಸಲ್ ಮಾಡಲಿದೆಂದು ಎಚ್ಚರಿಕೆ ನೀಡಿದ್ದಾರೆ.