
ನವದೆಹಲಿ, ಮೇ 22: ಪಶ್ಚಿಮ ಏಷ್ಯಾದಲ್ಲಿನ ಪ್ರಕ್ಷುಬ್ಧತೆ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಲುಗಾಡಿಸುತ್ತಿರುವುದರಿಂದ ವಿಶ್ವದ ಅತಿದೊಡ್ಡ ಕಚ್ಚಾ ಆಮದುದಾರರಲ್ಲಿ ಒಂದಾದ ಭಾರತಕ್ಕೆ ದೊಡ್ಡ ಇಂಧನ ಪೂರೈಕೆದಾರನಾಗಿ ಅಮೆರಿಕ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿದೆ.
ಮೇ 23ರಿಂದ ಪ್ರಾರಂಭವಾಗುವ ನವದೆಹಲಿಯ ತಮ್ಮ ಮೊದಲ ಭೇಟಿಗೆ ಮುನ್ನ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು, ಹಾರ್ಮುಜ್ ಜಲಸಂಧಿಯಲ್ಲಿ ಅಡಚಣೆಗಳ ಬಗ್ಗೆ ಅನಿಶ್ಚಿತತೆ ಹೆಚ್ಚುತ್ತಿರುವುದರಿಂದ ಅಮೆರಿಕವು “ಭಾರತ ಖರೀದಿಸುವಷ್ಟು ಇಂಧನವನ್ನು ಮಾರಾಟ ಮಾಡಲು ಬಯಸುತ್ತದೆ” ಎಂದು ಹೇಳಿದ್ದಾರೆ.
“ಅವರು ಖರೀದಿಸಿದಷ್ಟು ಇಂಧನವನ್ನುಮಾರಾಟ ಮಾಡಲು ನಾವು ಬಯಸುತ್ತೇವೆ. ಮತ್ತು ನಿಸ್ಸಂಶಯವಾಗಿ, ನೀವು ನೋಡಿದ್ದೀರಿ, ನಾವು ಯುಎಸ್ ಉತ್ಪಾದನೆ ಮತ್ತು ಯುಎಸ್ ರಫ್ತಿನ ಐತಿಹಾಸಿಕ ಮಟ್ಟದಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ” ಎಂದು ರುಬಿಯೊ ಸ್ವೀಡನ್ ಗೆ ಹೊರಡುವ ಮೊದಲು ಮಿಯಾಮಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದರು.
ಭಾರತವು ತನ್ನ ಕಚ್ಚಾ ತೈಲದ ಅಗತ್ಯಗಳಲ್ಲಿ ಬಹುಪಾಲು ಆಮದು ಮಾಡಿಕೊಳ್ಳುತ್ತದೆ ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗು ಮಾರ್ಗಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ದೀರ್ಘಕಾಲೀನ ಇಂಧನ ಭದ್ರತೆ ಮತ್ತು ಪೂರೈಕೆ ವೈವಿಧ್ಯೀಕರಣದ ಬಗ್ಗೆ ಕಳವಳ ಹೆಚ್ಚಿಸಿವೆ.
ಅಮೆರಿಕದ ಇಂಧನ ರಫ್ತುಗಳು ಭಾರತದ ಆಮದು ಬಂಡವಾಳದ ಹೆಚ್ಚಿನ ಭಾಗವಾಗಬೇಕೆಂದು ಟ್ರಂಪ್ ಆಡಳಿತವು ಬಯಸುತ್ತದೆ ಎಂದು ರುಬಿಯೊ ಸ್ಪಷ್ಟಪಡಿಸಿದರು.
“ನಾವು ಹೆಚ್ಚಿನದನ್ನು ಮಾಡಲು ಬಯಸುತ್ತೇವೆ. ಹೆಚ್ಚಿನದನ್ನು ಮಾಡಲು ನಾವು ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅವರು ತಮ್ಮ ಪೆÇೀರ್ಟ್ ಪೆÇೀಲಿಯೊದ ದೊಡ್ಡ ಭಾಗವಾಗಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು
ಯುಎಸ್ ಇತ್ತೀಚಿನ ವರ್ಷಗಳಲ್ಲಿ ತೈಲ ಮತ್ತು ಅನಿಲ ಉತ್ಪಾದನೆಯನ್ನು ಹೆಚ್ಚಿಸಿದೆ ಮತ್ತು ಈಗ ಭಾರತದಂತಹ ಪ್ರಮುಖ ಖರೀದಿದಾರರಿಗೆ ರಫ್ತುಗಳನ್ನು ವಿಸ್ತರಿಸಲು ನೋಡುತ್ತಿದೆ, ವಿಶೇಷವಾಗಿ
ಏಷ್ಯಾದ ದೇಶಗಳು ಭೌಗೋಳಿಕ ರಾಜಕೀಯ ಅಸ್ಥಿರತೆಯ ನಡುವೆ ಹೆಚ್ಚು ವಿಶ್ವಾಸಾರ್ಹ ಪೂರೈಕೆದಾರರನ್ನು ಹುಡುಕುತ್ತಿವೆ.
“ವೆನೆಜುವೆಲಾದ ತೈಲದೊಂದಿಗೆ ಅವಕಾಶಗಳಿವೆ ಎಂದು ನಾವು ಭಾವಿಸುತ್ತೇವೆ. ವಾಸ್ತವವಾಗಿ, ವೆನಿಜುವೆಲಾದ ಹಂಗಾಮಿ ಅಧ್ಯಕ್ಷರು ಮುಂದಿನ ವಾರವೂ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬುದು ನನ್ನ ತಿಳುವಳಿಕೆಯಾಗಿದೆ” ಎಂದು ರುಬಿಯೊ ಹೇಳಿದರು.
ಕಾರ್ಯಸೂಚಿಯಲ್ಲಿ ಇಂಧನ ಭದ್ರತೆ
ರುಬಿಯೊ ಭಾರತವನ್ನು “ಉತ್ತಮ ಪಾಲುದಾರ” ಎಂದು ಕರೆದಿದ್ದಾರೆ ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಈ ಭೇಟಿ ಒಂದು ಪ್ರಮುಖ ಕ್ಷಣದಲ್ಲಿ ಬಂದಿದೆ ಎಂದು ಹೇಳಿದ್ದಾರೆ.
“ಅವರು (ಭಾರತ) ಉತ್ತಮ ಮಿತ್ರರು, ಉತ್ತಮ ಪಾಲುದಾರರು. ನಾವು ಅವರೊಂದಿಗೆ ಸಾಕಷ್ಟು ಉತ್ತಮ ಕೆಲಸ ಮಾಡುತ್ತೇವೆ. ಆದ್ದರಿಂದ ಇದು ಒಂದು ಪ್ರಮುಖ ಪ್ರವಾಸವಾಗಿದೆ” ಎಂದು ರುಬಿಯೊ ಹೇಳಿದರು.
ಮೇ 23-26 ರಂದು ಕೋಲ್ಕತ್ತಾ, ಆಗ್ರಾ, ಜೈಪುರ ಮತ್ತು ನವದೆಹಲಿಗೆ ಭೇಟಿ ನೀಡಲಿದ್ದಾರೆ. ಯುಎಸ್ ಸ್ಟೇಟ್ ಡಿಪಾಟ್ರ್ಮೆಂಟ್ ಪ್ರಕಾರ, ಈ ಭೇಟಿಯು ಇಂಧನ, ರಕ್ಷಣೆ, ವ್ಯಾಪಾರ ಮತ್ತು ಭದ್ರತಾ ಸಹಕಾರದ ಮೇಲೆ ಕೇಂದ್ರೀಕರಿಸುತ್ತದೆ.






















