Home ಜಿಲ್ಲೆ ಬಳ್ಳಾರಿ ನಗರದಲ್ಲಿ ಮುಂದುವರೆದ ಸರ್ಕಾರಿ ನಿವೇಶನದ ಒತ್ತುವರಿ ತೆರವು

ಬಳ್ಳಾರಿ ನಗರದಲ್ಲಿ ಮುಂದುವರೆದ ಸರ್ಕಾರಿ ನಿವೇಶನದ ಒತ್ತುವರಿ ತೆರವು

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.08: ನಗರದಲ್ಲಿನ ಸರ್ಕಾರಿ ನಿವೇಶನ, ಜಮೀನನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವ ಕಾರ್ಯ ಮುಂದುವರೆದಿದೆ.

ಇಂದು ನಗರದ ಕೋಟೆ ಪ್ರದೇಶದ ವಾರ್ಡ್ ನಂ 21. ಟಿ.ಎಸ್ಡೋ.ನಂಬರ್ 94 ರ ಡೋರ್ ನಂಬರ 5 ರ. 40 ಸೇಂಟ್ಸ್ ನಿವೇಶನವನ್ನು ಕಬ್ಜಾ ಮಾಡಿಕೊಳ್ಳಲಾಗಿತ್ತು. ಅದನ್ನು ತೆರವುಗಿಳಿಸಲಾಗಿದೆ.

ಇನ್ನು ನಲ್ಲ ಚರವು ಪ್ರದೇಶದ ಶಾದಿ ಮಹಲ್ ಹಿಂಭಾಗದಲ್ಲಿನ ವಾರ್ಡ್ ನಂಬರ್ 20. ಟಿ.ಎಸ್.ನಂಬರ್ 941, 943, 945 ಕ್ಕೆ ಸೇರಿದ 4.83 ಎಕರೆಯನ್ನು ಸಹ ತೆರವು ಮಾಡಿದೆ.

ಈ ಕಾರ್ಯ ಎಡಿಸಿ ಮಹಮ್ಮದ್ ಝುಬೇರ್ ಅವರ ನೇತೃತ್ವದಲ್ಲಿ ನಡೆಯಿತು.