Home ಪಾಕವಿಧಾನ ಚೈನೀಸ್ ಚಿಲ್ಲಿ ಚಿಕನ್

ಚೈನೀಸ್ ಚಿಲ್ಲಿ ಚಿಕನ್

ಬೇಕಾಗುವ ಸಾಮಗ್ರಿಗಳು
*ಚಿಕನ್ ಪೀಸ್ – 1/4 4.2, * -2
*ಶುಂಠಿ ತುರಿ 2 ಚಮಚ, *ಬೆಳ್ಳುಳ್ಳಿ 3
*ಕಾಳು ಮೆಣಸಿನ ಪುಡಿ- 1 ಚಮಚ
*ಗರಂ ಮಸಾಲ 1 ಚಮಚ
*ಸೋಯಾಸಾಸ್ 1 ಚಮಚ –
2 ಚಮಚ, ಕೊತ್ತಂಬರಿ ಸೊಪ್ಪು
*ಅಚ್ಚಖಾರದ ಪುಡಿ 2 ಚಮಚ, *ಅಕ್ಕಿ ಹಿಟ್ಟು – 1/2 ಕಪ್
*ಕಾರ್ನ್ ಫೆÇ್ಲೀರ್ -2 ಚಮಚ,
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ 2 ಚಮಚ
*ಮೊಟ್ಟೆ – 1, *ಕರಿಬೇವು -5 ?
*ದಪ್ಪ ಮೆಣಸಿನಕಾಯಿ- 1
*ಕಸೂರಿ ಮೇಥಿ 2 ಚಮಚ
*ವಿನಿಗರ್ 2 ಚಮಚ, *ಹಸಿರು ಮೆಣಸಿನಕಾಯಿ -5
*ಎಣ್ಣೆ – 50 ಗ್ರಾಂ, *ನೀರು – ಅಳತೆಗೆ
*ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಬೌಲಿಗೆ ಚಿಕನ್ ಕಾರ್ನ್‍ಫೆÇ್ಲೀರ್, ಅಕ್ಕಿ ಹಿಟ್ಟು, ಅರಿಶಿಣ, ಅಚ್ಚಖಾರದ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕಸೂರಿ ಮೇಥಿ, ಗರಂ ಮಸಾಲ, ಸೋಯಾಬೀನ್, ವಿನಿಗರ್, ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದು ತೆಗೆದಿಟ್ಟುಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ. ಕಾದ ಮೇಲೆ ಕರಿಬೇವು, ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ತುರಿ, ಬೆಳ್ಳುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಸೂರಿ ಮೇಥಿ, ಅರಿಶಿಣ, ದಪ್ಪ ಮೆಣಸಿನಕಾಯಿ, ಗರಂ ಮಸಾಲ, ಕಾಳು ಮೆಣಸಿನ ಪುಡಿಗಳೆಲ್ಲವನ್ನು ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಪ್ರೈ ಮಾಡಿ. ನಂತರ ಸ್ವಲ್ಪ ಕಾರ್ನ್ ಫೆÇ್ಲೀರ್ ಮತ್ತು ನೀರಿನ ಮಿಶ್ರ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಕರಿದಿಟ್ಟುಕೊಂಡ ಚಿಕನ್, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಚೈನೀಸ್ ಚಿಲ್ಲಿ ಚಿಕನ್ ಸವಿಯಲು ರೆಡಿ.