Home ಜಿಲ್ಲೆ ಸ್ವಚ್ಚಗೊಳ್ಳದ ಬಸವೇಶ್ವರ ಸರ್ಕಲ್ ಫಲಕದ ಸ್ಥಳ

ಸ್ವಚ್ಚಗೊಳ್ಳದ ಬಸವೇಶ್ವರ ಸರ್ಕಲ್ ಫಲಕದ ಸ್ಥಳ

oplus_2097152

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.19: ಕಳೆದ ವರ್ಷ ಬಸವ ಜಯಂತಿಯಂದು ಈ ಸರ್ಕಲ್ ಗೆ ( ಈ ಹಿಂದಿನ ಕೆಇಬಿ) ಬಸವೇಶ್ವರ ಸರ್ಕಲ್ ಎಂದು ಹೆಸರಿಸಿದರು ನಗರದ ಶಾಸಕ ನಾರಾಭರತ್ ರೆಡ್ಡಿ ಮೊದಲಾದ ಗಣ್ಯರು.

ಅಂದು ಶಾಸಕ ಭರತ್ ರೆಡ್ಡಿಯವರು. ಈ ಸ್ಥಳದಲ್ಲಿ ಬರುವ ವರ್ಷದ ಬಸವ ಜಯಂತಿ ಒಳಗೆ ಅಶ್ವಾರೂಡ ಬಸವಣ್ಣನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿ ಬಸವ ಜಯಂತಿ ಆಚರಿಸಲಿದೆಂದು ಹೇಳಿದ್ದರು. ಆದರೆ ಆ ಕೆಲಸ ಆಗಲಿಲ್ಲ.

ಈ ವರ್ಷದ ಬಸವ ಜಯಂತಿಗೆ ಕನಿಷ್ಟ ಪಕ್ಷ ಈ ಸ್ಥಳವನ್ನು ಸ್ವಚ್ಚಗೊಳಿಸಿ ಬಸವೇಶ್ವರ ಹೆಸರಿನ ಫಲಕಕ್ಕೆ ಹೂ ಮಾಲೆ ಅರ್ಪಿಸುವ ಕೆಲಸವಾದರೂ ಆಗಬೇಕಿತ್ತು. ಇಂದು ಬೆಳಿಗ್ಗೆವರೆಗೆ ಇಲ್ಲಿ ಸ್ವಚ್ಚತೆ ಮಾಡಿದ್ದು ಸಹ ಕಂಡು ಬರಲಿಲ್ಲ.