ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.30-ರೋಟರಿ ಸಂಸ್ಥೆ ದೊಡ್ಡ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದು,ಸಮಾಜದಉನ್ನತಿಗಾಗಿ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆಎಂದುಜಿಲ್ಲಾಗೌರರ್ ಸತೀಶ್ ಬೋಳಾರ್ ಹೇಳಿದರು.
ನಗರದಡಾ.ರಾಜ್‍ಕುಮಾರ್ ಕಲಾ ಮಂದಿರದಲ್ಲಿ ನಡೆದರೋಟರಿ ಸಂಸ್ಥೆಯ 2025-2026ನೇ ಸಾಲಿನ ಅಧ್ಯಕ್ಷರಾದ ಬಿ.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ.ನೂತನಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರದಗ್ರಹಣ ಪ್ರಮಾಣ ವಚನ ಭೋದಿಸಿ ಮಾತನಾಡಿದರು.ರೋಟರಿ ಸಂಸ್ಥೆಯು ಸಮಾಜದಅಭಿವೃದ್ಧಿಗಾಗಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಪಲ್ಸ್ ಪೆÇೀಲಿಯೋ ವಿರ್ಮೂಲನೆ, ಅಂಧತ್ವ ನಿರ್ಮೂಲನೆ, ಆರೋಗ್ಯ ಸುಧಾರಣೆ, ಶಿಕ್ಷಣಕ್ಕೆ ಆದ್ಯತೆ ಹಾಗೂ ಸ್ವಚ್ಚ ಸಮಾಜ ನಿರ್ಮಾಣ ಮಾಡುವುದು, ಪರಿಸರ ಸಂರಕ್ಷಣೆ ಮಾಡುವುದುರೋಟರಿ ಸಂಸ್ಥೆಯ ಮುಖ್ಯಗುರಿಯಾಗಿದೆಎಂದರು.
ಚಾಮರಾಜನಗರರೋಟರಿ ಸಂಸ್ಥೆಯುಉತ್ತಮರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, 2025-26ನೇ ಸಾಲಿನ ನೂತನ ಪದಾಧಿಕಾರಿಗಳು ಹೆಚ್ಚು ಹೆಚ್ಚು ಸೇವಾ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.
ರೋಟರಿ ಸಂಸ್ಥೆಯ ನೂತನಅಧ್ಯಕ್ಷರಾಗಿಅಧಿಕಾರ ಸ್ವೀಕರಿಸಿದ ಕಾಗಲವಾಡಿಚಂದ್ರು ಮಾತನಾಡಿ, ರೋಟರಿ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಡಯಾಲಿಸಿಸ್ ಕೇಂದ್ರ.ಕಣ್ಣಿನತಪಾಸಣೆ ಶಿಬಿರ ಸೇರಿದಂತೆಇತರ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆಎಂದರು.
ರೋಟರಿ ಸಂಸ್ಥೆ ವತಿಯಿಂದಅಂಕಶಟ್ಟಿಪುರದತಲಸೋಮಿಯಕಾಯಿಲೆಯಿಂದ ಬಳಲುತ್ತಿದ್ದ ಚಿಕಿತ್ಸೆ ವೆಚ್ಚಕ್ಕೆ 43150ರೂ.ಹಾಗೂರೋಟರಿ ಸಂಸ್ಥೆ ದತ್ತು ಪಡೆದಇಬ್ಬರು ವಿದ್ಯಾರ್ಥಿಗಳಿಗೆ38 ಸಾವಿರರೂಗಳನ್ನು, ನೀಡಲಾಯಿತು. ಕೌದಳ್ಳಿ ಕರುಣಾಟ್ರಸ್ಟ್ 10 ಸಾವಿರಮೌಲ್ಯದಔಷಧಿ,ಆಹಾರ ಪದಾರ್ಥಗಳು, ಉತ್ತುವಳ್ಳಿ ವಿದ್ಯಾರ್ಥಿಗೆ 10 ಸಾವಿರರೂ., ಡಯಾಲಿಸಿಸ್‍ಕೇಂದ್ರಕ್ಕೆ10 ಸಾವಿರ ಮತ್ತು ಬ್ಲಾಂಕೆಟ್ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗೆ ಸನ್ಮಾನಿಸಿ ಪೆÇ್ರೀತ್ಸಾಹಧನ ನೀಡಲಾಯಿತು.ಪಿಯುಸಿ ವಿದ್ಯಾರ್ಥಿಗೆ ಸಹ ಸನ್ಮಾನಿಸಿ ಪೆÇ್ರೀತ್ಸಾಹಧನ ನೀಡಲಾಗಿದೆಎಂದು ಸೇವಾ ಕಾರ್ಯಗಳನ್ನು ವಿವರಿಸಿದರು.
ರೋಟರಿ ಸಂಸ್ಥೆ ಕ್ರೀಡೆಯಲ್ಲಿ ಅಮೋಘ ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಸನ್ಮಾನಿಸಿ. ಮತ್ತುವಿವಿಧಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಚಿಕ್ಕಲಿಂಗಯ್ಯ, ಪತ್ರಕರ್ತ ಫಾಲಲೋಚನ ಆರಾಧ್ಯ,ಸಾಹಿತಿ ದಿಲೀಪ್‍ಕುಮಾರ್.ಡಾ. ರೆಡ್ಮಿಜಾನ್ ಮ್ಯಾರೇಜ್ ಇವರುಗಳನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲುರೋಟರಿ ಸಂಸ್ಥೆಯ 2025-26ನೇ ಸಾಲಿನ ಅಧ್ಯಕ್ಷರಾಗಿ ಬಿ.ಚಂದ್ರಶೇಖರ್, ಉಪಾಧ್ಯಕ್ಷರಾಗಿಅಬ್ದುಲ್‍ಅಜೀಜ್, ಕಾರ್ಯದರ್ಶಿ ಸಿದ್ದರಾಜು, ಜಂಟಿ ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಖಜಾಂಚಿ ಆರ್.ಎಂ.ಸ್ವಾಮಿ, ದಂಡಾಯುಧಪಾಣಿಯಾಗಿಎಂ.ರಮೇಶ್, ನಿರ್ದೇಶಕರಾಗಿಸಿದ್ದಮಲ್ಲಪ್ಪ, ಬಿ.ರತ್ನಮ್ಮ, ಎಸ್.ಅಶೋಕ್, ರಾಜು ವರ್ಗೀಸ್, ಆರ್.ಎನ್.ರಾಮು, ಛೇರ್ಮನ್‍ಆಗಿ ಜಿ.ಆರ್.ಅಶ್ವಥ್ ನಾರಾಯಣ್, ಎಸ್.ಸುರೇಶ್, ಸಿ.ವಿ.ಶ್ರೀನಿವಾಸಶೆಟ್ಟಿ, ಗುರುಸ್ವಾಮಿ, ಡಿ.ನಾಗರಾಜು, ಆರ್.ಪ್ರಕಾಶ್, ಕೆ.ಎಂ.ಮಹಾದೇವಸ್ವಾಮಿ, ಸಿ.ಎ.ರಮೇಶ್, ವಿ.ಪ್ರಭಾಕರ್, ಸಿ.ಎ.ನಾರಾಯಣ್, ಆರ್.ಸುಭಾμï, ಎಂ.ಕಮಲ್‍ರಾಜು, ಸಿ.ಎನ್. ಚಂದ್ರಪ್ರಭಜೈನ್, ಬಿ.ಕೆ.ಮೋಹನ್‍ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಸಹಾಯಕಗೌರ್ನರ್‍ಡಿ.ಎಸ್.ಗಿರೀಶ್, ವಲಯ ಪ್ರತಿನಿಧಿ ರಮೇಶ್, ನಿಕಟಪೂರ್ವಅಧ್ಯಕ್ಷಎಲ್.ನಾಗರಾಜು, ಕಾರ್ಯದರ್ಶಿ ಹೆಚ್.ಎಂ.ಗುರುಸ್ವಾಮಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.