
ಪುತ್ತೂರು; ಪುಂಜಾಲಕಟ್ಟೆ ಕುಕ್ಕಳ ಗ್ರಾಮದ ಹೊಸಮನೆ ದಿ. ಉಗ್ಗಪ್ಪ ಗೌಡರ ಧರ್ಮಪತ್ನಿ ಸೇಸಮ್ಮ (೮೪) ಮಾರ್ಚ್ ೧೯ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ನಾಟಿ ಔಷಧದ ಸೇವೆಯನ್ನು ಗ್ರಾಮೀಣ ಪರಿಸರದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿ ಜನಾನುರಾಗಿಯಾಗಿದ್ದ ಸೇಸಮ್ಮ ಅವರು ಜನಪರ ಸೇವೆ ಮಾಡುತಿದ್ದರು. ಇದಲ್ಲದೆ ಸಂಧಿ ಪಾಡ್ದನ ಮತ್ತು ಶೋಭಾನೆ ಹಾಡುಗಳ ಮೂಲಕವೂ ಅವರು ಪ್ರಸಿದ್ಧಿ ಪಡೆದಿದ್ದರು.
ಇವರು ಇಬ್ಬರು ಪುತ್ರರಾದ ವಸಂತ ಗೌಡ, ಗೋಪಾಲ ಗೌಡ, ಪುತ್ರಿಯರಾದ ಜಯಂತಿ, ವಾರಿಜಾ, ವಸಂತಿ ಮತ್ತು ಕುಸುಮ ಪಾಲೆತ್ತಾಡಿ. ಅಳಿಯಂದಿರಾದ ಮುತ್ತಪ್ಪ ಗೌಡ, ಪದ್ಮನಾಭ ಗೌಡ ಮತ್ತು ಚಂದ್ರಶೇಖರ್ ಪಾಲೆತ್ತಾಡಿ, ಸೊಸೆಯಂದಿರಾದ ಪುಷ್ಪಲತಾ ಮತ್ತು ಸುಗುಣ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.































