
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.19: ನಾಳೆ ನಗರದಲ್ಲಿ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನ ಜತಂತಿಯನ್ನು ಸಡಗರ ಸಂಭ್ರಮದ ಮೂಲಕ ಆಚರಿಸಲು ನಗರದ ವೀರಶೈವ ಲಿಂಗಾಯತ ಸಮಾಜ ನಿರ್ಧರಿಸಿದೆ.
ಬಸವ ಜಯಂತಿ ಆಚರಣೆ ಕುರಿತು ನಿನ್ನೆ ಸಂಜೆ ನಗರದ ಶರಣ ಸಕ್ಕರೆ ಕರಡೀಶ ನಿಲಯದಲ್ಲಿ ಸಭೆ ಸೇರಿದ್ದ ಸಮಾಜದ ಮುಖಂಡರು. ಆಚರಣೆ ಕುರಿತು ಚರ್ಚಿಸಿದರು.
ಬೆಳಿಗ್ಗೆ ಬಸವೇಶ್ವರ ನಗರದ ರಾಷ್ಟ್ರೀಯ ಬಸವ ದಳದಿಂದ ಬಸವೇಶ್ವರನ ಭಾವಚಿತ್ರದ ಫಲಕಗಳೊಂದಿಗೆ ಬೈಕ್ ರ್ಯಾಲಿಯ ಮೂಲಕ ಹೆಚ್.ಆರ್.ಗವಿಯಪ್ಪ ವೃತ್ತದವರೆಗೆ ಆಗಮಿಸಿ ಇಲ್ಲಿನ ಸಿಂಹಾಸನಾ ರೂಡ ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನಸಲ್ಲಿಸುವುದು.
ಈ ವೇಳೆ ದರೂರು ಶಾಂತನಗೌಡ ನೇತೃತ್ವದ ತಂಡ ಕೂಡಲ ಸಂಗಮದಿಂದ ತರುವ ಬಸವ ಜ್ಯೋತಿಯನ್ನು ಸಹ ಬೈಕ್ ರ್ಯಾಲಿಯಲ್ಲಿ ತರುವುದು.
ಸಂಜೆ 5 ಗಂಟೆಗೆ ಮುನಿಷಿಪಲ್ ಹೈಸ್ಕೂಲ್ ಮೈದಾನದಿಂದ ಬಸವೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಜಿಲ್ಲಾಡಳಿತದೊಂದಿಗೆ ಕೈಗೊಳ್ಳುವುದು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರು ಕಲಾ ತಂಡಗಳನ್ನು ನೀಡಲಿದೆ. ರಾಷ್ಟ್ರೀಯ ಬಸವ ದಳದ ಬಸವೇಶ್ವರ ಭಾವಚಿತ್ರದ ಸ್ಥಬ್ದ ಚಿತ್ರವೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಿದೆಂದು ಹೇಳಲಾಯ್ತು.
ನಂತರ ಡಾ.ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಂಜೆ 7 ಕ್ಕೆ ವೇದಿಕೆ ಕಾರ್ಯಕ್ರಮ ಇರಲಿದೆ. ಮೆರವಣಿಗೆ ಮತ್ತು ಕಾರ್ಯಕ್ರಮಕ್ಕೆ ಹಳ್ಳಿಗಳಿಂದ ಜನರು ಬರುವುದಾದರೆ ಅದಕ್ಕೆ ವೀರಶೈವ ವಿದ್ಯಾವರ್ಧಕ ಸಂಘದ ಬಸ್ ಗಳನ್ನು ನೀಡಲಿದೆಂದು ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಹಾಂತೇಶ್ ಹೇಳಿದರು.
ಸಮಾಜದ ಮುಖಂಡರು, ಹಿರಿಯ ಲೆಕ್ಕಪರಿಶೋಧಕರಾದ ಸಿರಿಗೇರಿ ಪನ್ನರಾಜ್ ಅವರು ಮೆರವಣಿಗೆ ಮತ್ತು ಸಮಾರಂಭಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಇನ್ನು ಪ್ರಸಾದ ವ್ಯವಸ್ಥೆಯನ್ನು ನಗರ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ಮಾಡಿಸುವುದಾಗಿ ಹೇಳಿದರು.
ಮೆರವಣಿಗೆ ಪಟಾಕಿ, ಬಾವುಟ, ಶಾಲುಗಳ ವ್ಯವಸ್ಥೆಯನ್ನು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಂಕ್ರಮೀಕರಣ ಸಮಿತಿಯ ಅಧ್ಯಕ್ಷ, ಹೆಚ್ ತಿಮ್ಮನಗೌಡ ಮಾಡುವುದಾಗಿ ಹೇಳಿದರು. ಮಜ್ಜಿಗೆ ವ್ಯವಸ್ಥೆಯನ್ನು ಕೆಎಂಎಫ್ ನಿಂದ ಮಾಡುವ ಬಗ್ಗೆ ಚರ್ಚೆ ನಡೆಯಿತು.
ಅಖಿಲ ಭಾರತ ವೀರಶೈವ ಮಹಾಸಭಾ, ವಿಉರಶೈವ ತರುಣ ಸಂಘ, ವೀರಶೈವ ಲಿಂಗಾಯತ ಸಮಾಜ,






















