Home ಜಿಲ್ಲೆ ಜೂನ್ 1 ರಿಂದ ನಗರದಲ್ಲಿ ಮತ್ತೆ ಹೆಲ್ಮೆಟ್ ಕಡ್ಡಾಯ

ಜೂನ್ 1 ರಿಂದ ನಗರದಲ್ಲಿ ಮತ್ತೆ ಹೆಲ್ಮೆಟ್ ಕಡ್ಡಾಯ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.8: ಬೇಸಿಗೆ ಎಂದು   ಹೆಲ್ಮೆಟ್ ಕಡ್ಡಾಯಕ್ಕೆ ರಿಲ್ಯಾಕ್ಸ್ ನೀಡಿತ್ತು . ಆದರೆ ನಗರದಲ್ಲಿ ಬರುವ ಜೂನ್ ಒಂದರಿಂದ ಮತ್ತೆ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಖಡ್ಡಾಯ ಖಡ್ಡಾಯಗೊಳಿಸಲಿದೆಂದು ಎಸ್ಪಿ ಡಾ. ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ

ಅವರಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಡಿ ನಡೆಸಿ.

ಈಗಿನಿಂ ದಲೇ  ಹೆಲ್ಮೆಟ್ ಖಡ್ಡಾಯ ಕುರಿತು  ಜೂನ್ ಒಂದರ ವರೆಗೆ ಜಾಗೃತಿ ಅಭಿಯಾನ ನಡೆಸಲಿದೆಂದರು.

ಕಳೆದ 3 ವರ್ಷದಲ್ಲಿ ದ್ವಿಚಕ್ರ ವಾಹನಗಳಿಂದ  1009 ಪ್ರಕರಣ ದಾಖಲಾಗಿದ್ದು ಇದರಲ್ಲಿ 462 ಸಾವನ್ನಪ್ಪಿದ್ದಾರೆ. 1072 ಜನರು ಗಾಯಾಳುಗಳಾಗಿದ್ದಾರೆ. ಇದರಲ್ಲಿ ಹೆಲ್ಮೆಟ್ ಇಲ್ಲದೆ.

ತಲೆಗೆ ಪೆಟ್ಟು ಬಿದ್ದು ಸಾವಾಗಿರೋ ಘಟನೆ ಹೆಚ್ಚಾಗ್ತಿದೆ.

ಜೂನ್ 1ರಿಂದ ಖಡ್ಡಾಯವಾಗಿ ಎಲ್ಲರೂ ಹೆಲ್ಮೆಟ್ ಧರಿಸಬೇಕು ಎಂದ ಅವರು. ಆಪ್ರಾಪ್ತರು ಬೈಕ್ ಚಾಲನೆ  ಮಾಡಿದರೆ  ಅವರ ಪೋಷಕರಿಗೆ 25   ಸಾವಿರ ರೂ ದಂಡ ಹಾಕಲಿದ್ದೇವೆಂದು ಹೇಳಿದರು.