Home ಜಿಲ್ಲೆ ಅಕ್ರಮ ಅಕ್ಕಿಯ ದಂಧೆಯಿಂದ 3 ಲಕ್ಷ ವಸೂಲಿ ಮಾಡಿದ ಎಸ್ಪಿ ಗನ್ ಮ್ಯಾನ್ ಬಂಧನ ಅಮಾನತು

ಅಕ್ರಮ ಅಕ್ಕಿಯ ದಂಧೆಯಿಂದ 3 ಲಕ್ಷ ವಸೂಲಿ ಮಾಡಿದ ಎಸ್ಪಿ ಗನ್ ಮ್ಯಾನ್ ಬಂಧನ ಅಮಾನತು

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.08:  ಅಕ್ಕಿ ದಂಧೆಯ ಬಗ್ಗೆ ಜಿಲ್ಲೆಯ ಪೋಲಿಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಈ ಬಗ್ಗೆ ಹತ್ತಾರು ಕೇಸುಗಳು ದಾಖಲಾಗಿವೆ. ಆದರೂ  ಎಸ್ಪಿ ಸ್ಕ್ವಾರ್ಡ್ ಎಂದು ಸ್ವತಃ ಎಸ್ಪಿ ಗನ್ ಮ್ಯಾನ್  ಅಕ್ರಮ ಪಡಿತರ ಅಕ್ಕಿ ದಂಧೆಕೋರರಿಂದ ಮೂರು ಲಕ್ಷ ಹಣ ವಸೂಲಿ ಮಾಡಿದ್ದು ಆತನನ್ನು ಬಂಧಿಸಲಾಗಿದೆ.

ಈ ಬಗ್ಗೆ ಇಂದು ಸ್ವತಃ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್  ತಮ್ಮಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ. ತಮ್ಮ ಗನ್ ಮ್ಯಾನ್ ದೇವರಾಜ್ ಹಾಗೂ ಆತನ ಸಹಚರರು  ಏ.27 ರ ರಾತ್ರಿ 3 ಲಕ್ಷ ವಸೂಲಿ ಮಾಡಿದ್ದರು ಎಂದು ಅಕ್ರಮ ಅಕ್ಕಿ ಸಾಗಾಣೆದಾರ  ಶರಭಯ್ಯ ಎನ್ನುವವರು ಮೋಕಾ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪಡಿತರ ಅಕ್ಕಿ ತುಂಬಿ ಕೊಂಡು ಆಂಧ್ರಪ್ರದೇಶಕ್ಕೆ ಹೊರಟಿದ್ದ ಎರಡು ಲಾರಿಗಳನ್ನು ಅಡ್ಡಗಟ್ಟಿ ಎಸ್ಪಿ ಸ್ಕ್ವಾಡ್ ಅಂತ ಹೇಳಿ. ಹಣ ನೀಡದಿದ್ದರೆ ಸೀಜ್ ಮಾಡಿ ಜೈಲಿಗೆ ಕಳಿಸುವುದಾಗಿ ಜೀವ ಬೆದರಿಕೆ ಹಾಕಿದ್ದ. 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಗನ್ ಮ್ಯಾನ್ ದೇವರಾಜ್. ಕೊನೆಗೆ ಮೂರು ಲಕ್ಷಕ್ಕೆ ಡೀಲ್ ಮಾಡಿ ಹಣ ವಸೂಲಿ ಮಾಡಿದ್ದ. ಗನ್ ಮ್ಯಾನ್ ದೇವರಾಜ್ ಎಸ್ಪಿ ಸ್ಕ್ವಾಡ್ ಅಂತ ಹಣ ವಸೂಲಿ ಮಾಡಿರುವುದು ಖಚಿತವಾಗುವುದರಿಂದ ಆತನನ್ನು ಬಂಧಿಸಲಾಗಿದೆ.

ದೇವರಾಜ್ ಗೆ ಸಹಕಾರ ನೀಡಿದ ಇನ್ನಿಬ್ಬರು ಅರೋಪಿಗಳಾದ ವಕೀಲ ಗಾದಿಲಿಂಗ ನಾಪತ್ತೆಯಾಗಿದ್ದು ಮತ್ತು ಸಾಯಿರಾಮ್ ಎನ್ನುವವರು ಬಂಧಿಸಲಾಗಿದೆ.

ಹಣ , ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.

ಕಳೆದ ನಾಲ್ಕು ವರ್ಷದಿಂದ  ಆರೋಪಿ ದೇವರಾಜ್ ಗನ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ರು. ಪ್ರಕರಣದ ಹಿನ್ನಲೆಯಲ್ಲಿ ಅಮಾನತ್ತು ಮಾಡಲಾಗಿದೆ.

ಎಸ್ಪಿ ಸ್ಕ್ಯಾಡ್ , ಐಜಿ ಸ್ಕ್ಯಾಡ್ ಎಂದು ಪ್ರತ್ಯೇಕ ತಂಡವಿಲ್ಲ ಎಂದು ಸ್ಪಷ್ಟಪಡಿಸಿದ ಎಸ್ಪಿಯವರು ಇದೊಂದು ಪ್ರಮುಖ ಅಪರಾಧವಾಗಿದೆ.  ಎಸ್ಪಿ ಗಮ್ ಮ್ಯಾನ್ ಅಗಿದ್ದವರು ಹೀಗೆ ಮಾಡೋದು ದೊಡ್ಡ ತಪ್ಪು.

ಸ್ಕ್ಯಾಡ್ ಹೆಸರು ಹೇಳಿಕೊಂಡು ಯಾರೇ ಈ ರೀತಿಯಲ್ಲಿ ಹಣ ಬೇಡಿಕೆ ಇಟ್ರೇ

ಮಾಹಿತಿ ನೀಡಿ, ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿರಿಸಿ ತನಿಖೆ ಮಾಡಲಿದೆಂದು ಹೇಳಿದರು.

ಪೊಲೀಸರ ಮೇಲೆ ಆರೋಪ ಮಾಡಿ ದೂರು ದಾಖಲಿಸಿರೋ ಶರಭಯ್ಯಕೂಡ ಆರೋಪಿ ಅವರು ನಿರಂತರವಾಗಿ ಕಳ್ಳ ಅಕ್ಕಿ ಸಾಗಾಟ ಮಾಡುತ್ತಿದ್ದರು ಎಂದು ಹೇಳಿದರು.