ಜಗತ್ತಿಗೆ ಭಾರತ ನೀಡಿದ ದೊಡ್ಡ ಕೊಡುಗೆ ಯೋಗ

ಗುಳೇದಗುಡ್ಡ,ಜೂ24 : ಯೋಗವು ಅತ್ಯಂತ ಪ್ರಾಚೀನಕಾಲದಿಂದಲೂ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿವರ್ಷ ಯೋಗದ ದಿನಾಚರಣೆಯು ಯೋಗ, ಧ್ಯಾನ, ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗವು ಜಗತ್ತಿಗೆ ಭಾರತ ನೀಡಿದ ಒಂದು ದೊಡ್ಡ ಕೊಡುಗೆಯಾಗಿದೆ ಎಂದು ಪಿಇ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.


ಅವರು ಶನಿವಾರ ಪಟ್ಟಣದ ಭಂಡಾರಿ ಕಾಲೇಜಿನ ಮೈದಾನದಲ್ಲಿ ನಗರ ಸುಧಾರಣಾ ಸಮಿತಿ ಹಾಗೂ ಪಿಇ ಟ್ರಸ್ಟಿನ ವತಿಯಿಂದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಆಪರೇಷನ್ ಸಿಂಧೂರ ವೇದಿಕೆಯಲ್ಲಿ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ನಿವಾರಣೆಗೆ ಯೋಗದ ಮೊರೆ ಹೋಗುತ್ತಿದ್ದಾರೆ ಎಂದು ಹೇಳಿದರು.


ನಗರ ಸುಧಾರಣಾ ಸಮಿತಿ ಅಧ್ಯಕ್ಷ ರಂಗಪ್ಪ ಶೇಬಿನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹದೇವ ಜಗತಾಪ ಅವರ ಯೋಗ ನಡೆಸಿಕೊಟ್ಟರು. ಇವರಿಗೆ ಯೋಗಪಟುಗಳಾದ ಸಹನಾ ಮಾನುಟಗಿ, ಸುಪ್ರಿತಾ ಅರಕಾಲಚಿಟ್ಟಿ, ಪೂಜಾ ಸುನಗದ ಸಾಥ್ ನೀಡಿದರು. ಶಶಿಕಲಾ ಭಾವಿ ಅವರು ಯೋಗ ಗೀತೆ ಹಾಡಿದರು. 300ಕ್ಕೂ ಹೆಚ್ಚು ಜನರು ಈ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ ಅಶೋಕ ಹೆಗಡೆ, ಎಸ್.ಎಸ್. ನಾಯನೇಗಲಿ ಪುರುಷೋತ್ತಮ ಝವಂರ, ಮಲ್ಲಿಕಾರ್ಜುನ ಶೀಲವಂತ ಪ್ರಶಾಂತ ಜವಳಿ, ಮಧುಸೂಧನ ರಾಂದಡ, ಸಂಗಣ್ಣ ಹುನಗುಂದ, ಪೆÇಲೀಸಪ್ಪ ರಾಮದುರ್ಗ, ಶ್ರೀಕಾಂತ ಭಾವಿ, ವಿಠ್ಠಲ ಪತ್ತಾರ, ತೋಟಪ್ಪ ಶೇಖಪ್ಪ ಗೋಪಾಲ ಹಳ್ಳುರ, ಈರಣ್ಣ ಬಂಡಿ, ಮಹೇಶ ಭಾರತಿ, ಶಿವು ಬಾದೋಡಗಿ, ಭಾಗ್ಯಾ ಉದ್ನೂರ, ನಂದಾರ, ಅನಿಲ ಉಣಚಗಿ ಸೇರಿದಂತೆ ಇತರರು ಇದ್ದರು.