
ಲಕ್ಷೆ÷್ಮÃಶ್ವರ,ಮಾ.೧೬: ಮಹಿಳೆಯರು ಕುಟುಂಬ ವ್ಯವಸ್ಥೆಯಲ್ಲಷ್ಟೇ ಅಲ್ಲದೆ ಶಿಕ್ಷಣ, ಕೃಷಿ, ಆಡಳಿತ, ಉದ್ಯಮ, ವಿಜ್ಞಾನ ಮತ್ತು ಸಾಮಾಜಿಕ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ’ ಎಂದು ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷಿ÷್ಮ ಗಡ್ಡದೇವರಮಠ ಹಾಗೂ ಕಾರ್ಯದರ್ಶಿ ಜಯಲಕ್ಷಿ÷್ಮ ಮಹಾಂತಶೆಟ್ಟರ ಹೇಳಿದರು
ಅವರು ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಾತನಾಡುತ್ತ
ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಮಹಿಳೆಯರು ಶಿಕ್ಷಣ ಮತ್ತು ಕೌಶಲಾಭಿವೃದ್ಧಿಯ ಮೂಲಕ ಸಮಾಜದಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.
ವಿಶೇಷ ಆಮಂತ್ರಿತರಾಗಿ ಆಗಮಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕöÈತೆ ಲಲಿತಕ್ಕ ಕೆರಿಮನಿ ಹೆಣ್ಣು ಸಮಾಜದ ಕಣ್ಣು, ಬದುಕಿನ ಎಲ್ಲಾ ಸವಾಲಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ,ಎಲ್ಲಾ ಕಷ್ಟದ ದಿನಗಳನ್ನು ಎದುರಿಸಿ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ ಹೆಣ್ಮಕ್ಕಳ ಸಶಸ್ತಿçÃಕರಣ, ಶೋಷಣೆಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಮಹಿಳೆಯರು ಶಿಕ್ಷಿತರಾಗಬೇಕು. ಅಕ್ಷರ ಜ್ಞಾನ ಮಹಿಳೆಗೆ ಸ್ವಾಭಿಮಾನದ ಬದುಕು ನೀಡಲಿದೆ ಎಂದು ಹೇಳಿದರು,
ರೋಹಿಣಿಬಾಯಿ ಬಹಾದ್ದೂರ ದೇಸಾಯಿ,ಶಾರಕ್ಕ ಮಹಾಂತಶೆಟ್ಟರ,ಸಾವಿತ್ರಮ್ಮ. ಹೂವಿನ,ಎಸ್ ಎಂ ಹಾದಿಮನಿ,ವೇದಿಕೆ ಮೇಲೆ ಇದ್ದರು
ಈ ಸಂದರ್ಭದಲ್ಲಿ ಜೆ ಡಿ ಲಮಾಣಿ,ವಿಜಯ ಬಿಳೆಎಲಿ,ಸ್ವಾತಿ ಪೈ,ರೂಪಾ ನವಲೆ,ಪ್ರಭುಗೌಡ ಯಕ್ಕಿಕೊಪ್ಪ,ಸರಸ್ವತಿ ಹುಲ್ಲಣ್ಣವರ,ಹನುಮಂತಪ್ಪ ಭಜಂತ್ರಿ, ಇದ್ದರು ಸಂತೋಷ ಮುಳಗುಂದ, ಮಲ್ಲಿಕಾರ್ಜುನ ಶಿವಣ್ಣವರ,ಎಸ್ ಎಂ ಹಾದಿಮನಿ,ಎಂ ಸಿ ಹಿರೇಮಠ ಆರ್ ಎಂ ಕದಡಿ ಕಾರ್ಯಕ್ರಮ ನಿರ್ವಹಿಸಿದರು.



























