
ಬೀದರ್: ಮಾ.16:ಮಹಿಳೆ ಸುಕ್ಷಿತವಾದರೆ ಆಕೆಯ ತವರು ಹಾಗೂ ಗಂಡನ ಮನೆ ಬೆಳಗುವುದರ ಜೊತೆಗೆ ಇಡೀ ಸಮಾಜವೇ ಪ್ರಜ್ವಲಿಸುವುದು ಎಂದು ಗುರುನಾನಕ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ತಿಳಿಸಿದರು.
ಭಾನುವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರಾಜಮಾತಾ ಜಿಜಾವು ಮಹಿಳಾ ಸಮಿತಿ ಬೀದರ್ ವತಿಯಿಂದ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಓರ್ವ ಮಹಿಳೆ ಸುಶಿಕ್ಷಿತವಾದರೆ ಸಮಾಜದ ಸವಾಂಗಿಣ ಪ್ರಗತಿ ಸಾಧ್ಯವಿದೆ. ಶಿಕ್ಷಣದ ಜೊತೆಗೆ ಇಂದು ಸಂಸ್ಕಾರ, ಮಾನವಿಯ ಮೌಲ್ಯಗಳನ್ನು ಕಲಿಸುವುದು, ನೈತಿಕ, ಸಾಮಾಜಿಕ ಹಾಗೂ ಸೈದ್ದಾಂತಿಕ ನೆಲೆಗಟ್ಟನ್ನು ಅರಿತುಕೊಳ್ಳುವುದು ತುಂಬ ಅಗತ್ಯವಾಗಿದೆ ಎಂದರು.
ಮಹಿಳೆ ಅಬಲೆಯಲ್ಲ, ಆಕೆ ಎಲ್ಲದರಲ್ಲೂ ಸಬಲೆ. ನಾರಿಶಕ್ತಿ ಮುಂದೆ ಬಂದರೆ ಇಡೀ ಸಮಾಜ ಅದನ್ನು ಗೌರವಿಸುತ್ತದೆ. ಹಾಗಂತ ನಮ್ಮ ಸೀಮೆಯ ಕಟ್ಟೆಯೊಡೆಯದಂತೆ ತನ್ನ ಕುಟುಂಬ ಹಾಗೂ ಸಮಾಜದ ಜೊತೆ ಧೃಢವಾಗಿ ನಿಂತು ಮಾತೆ ಜೀಜಾಬಾಯಿ ಹಾಗೆ ತನ್ನ ಮಾತೃಶಕ್ತಿ ಪ್ರದರ್ಶಿಸಬೇಕಿದೆ ಎಂದವರು ಹೇಳಿದರು.
ನಮ್ಮ ಗುರುನಾನಕ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅದರಲ್ಲೂ ಗುರುನಾನಕದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಹಿಳೆಯರೆ 50 ಪ್ರತಿಶತಕ್ಕಿಂತ ಹೆಚ್ಚಿದ್ದು, ಇದರಿಂದ ಮಹಿಳೆ ಈಗ ಕೇವಲ ಕೆಲವೊಂದು ಕ್ಷೇತ್ರಕ್ಕೆ ಸೀಮಿತವಾಗಿರದೆ ಐಟಿ, ಬಿಟಿ, ತಾಂತ್ರಿಕ ಹಾಗೂ ಕೌಶಲ್ಯಾಧಾರಿತ ಕ್ಷೇತ್ರಗಳಿಗೂ ವಿಸ್ತಿರಿಸಿದ್ದು, ಇದು ಭವ್ಯ ಭಾರತಕ್ಕೊಂದು ಅಭಿವೃದ್ಧಿಯ ಕೈಗನ್ನಡಿಯಾಗಿದೆ ಎಂದು ಬಣ್ಣಿಸಿದರು.
ಧರಮಸಿಂಗ್ ಫೌಂಡೇಷನ್ ನಿರ್ದೇಶಕಿ ಸೋನಲ್ ವಿಜಯಸಿಂಗ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಓರ್ವ ಮಹಿಳೆ ಸುಶಿಕ್ಷಿತವಾದರೆ ಸಬಲಿಕರಣ, ಸಶಕ್ತಿಕರಣ ಹಾಗೂ ಸಾಂಸ್ಕøತಿಕರಣದ ವಿಚಾರಧಾರೆ ಇರಿಸಿ ಮುಂದೆ ಬರುವಳು. ನಾರಿಶಕ್ತಿ ದೇಶದ ಬಹುದೊಡ್ಡ ಶಕ್ತಿಯಾಗಿದ್ದಾಳೆ. ಮಹಿಳೆ ಮುಂದೆ ಬರಲು ನಮ್ಮ ಫೌಂಡೇಷನ್ ವತಿಯಿಂದ ಇನ್ನು ಸಾಕಷ್ಟು ಸಹಾಯ ಮಾಡುವುದಾಗಿ ತಿಳಿಸಿದರು.
ಸಮಾಜದ ಪೂಜ್ಯರಾದ ದಾದಾ ಮಹಾರಾಜ ನಗರಕರ್ ಸಾನಿಧ್ಯ ವಹಿಸಿ ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರಗಳಂತೆ ಅಧ್ಯಾತ್ಮದಲ್ಲೂ ಎತ್ತಿದ ಕೈ. ಹಾಗಾಗಿ ಈ ದೇಶದ ಚುಕ್ಕಾಣಿ ಹಿಡಿಯಲು ಓರ್ವ ಶಕ್ತಿಶಾಲಿ ಮಹಿಳೆಯ ಅಗತ್ಯವಿದೆ ಎಂದರು.
ಜಿ.ಎನ್.ಡಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಜಸ್ಮಿತ್ ಕೌರ್ ಮಾತನಾಡಿ, ಇಂದು ಮಹಿಳೆ ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಒತ್ತು ನೀಡಬೇಕು. ನಿತ್ಯ ಯೋಗ, ವ್ಯಾಯಾಮ ಜೊತೆಗೆ ದೈಹಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಬೇಕಿದೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಂದ ಮಹಿಳೆ ಜಾಗೃತಳಾಗಬೇಕೆಂದು ಕರೆ ಕೊಟ್ಟರು.
ಮಹಾನಗರ ಪಾಲಿಕೆಯ ಸದಸ್ಯೆ ಉಲ್ಲಾಸಿನಿ ಮುದಾಳೆ, ಪೆÇೀಲಿಸ್ ಅಧಿಕಾರಿ ಕೌಶಲ್ಯಾ ಮಸ್ಕಿ, ಅಕ್ಕಪಡೆಯ ಸಂಗೀತಾ, ವಿಜಯಾ ಜಾಧವ, ರೇಖಾ ಮುಳೆ, ಸೋನಿ ಬಿರಾದಾರ, ಅನಿತಾ ಭೋಸ್ಲೆ, ಸುರೇಖಾ ಜಾಧವ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.
ಆರಂಭದಲ್ಲಿ ಪ್ರಾಧ್ಯಾಪಕಿ ಸೋನಿ ಮಾನಕಾರಿ ಸರ್ವರನ್ನು ಸ್ವಾಗತಿಸಿ, ಪೆÇ್ರ.ಮೀನಾಕ್ಷಿ ಕಾಳೆ ಕಾರ್ಯಕ್ರಮ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.




















