ಮಹಿಳಾ ಪ್ರಯಾಣಿಕರನ್ನು ಗೌರವಿಸಬೇಕು: ಸಿಪಿಐ ಶ್ರೀಕಾಂತ ಅಲ್ಲಾಪುರೆ

ಕಮಲನಗರ: ಫೆ.25:ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಅದರ ಜೊತೆಗೆ ಮಹಿಳಾ ಪ್ರಯಾಣಿಕರನ್ನು ಗೌರವಿಸಬೇಕು ಮತ್ತು ಅವರನ್ನು ಕರೆದೊಯ್ಯುವಾಗ ಅನುಚಿತವಾಗಿ ವರ್ತಿಸಬಾರದು, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಶ್ರೀಕಾಂತ ಅಲ್ಲಾಪುರೆ ಹೇಳಿದರು.

ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಮಂಗಳವಾರ ರಸ್ತೆ ಸುರಕ್ಷತೆ, ಮಹಿಳಾ ಪ್ರಯಾಣಿಕರ ಸುರಕ್ಷತೆ ಕುರಿತು ಆಟೋ ಚಾಲಕರೊಂದಿಗೆ ಹಮ್ಮಿಕೊಂಡ ಸಭೆಯಲ್ಲಿ ಚಾಲಕರನ್ನು ಉದ್ದೇಶಿಸಿ ಮಾತನಾಡಿದರು.

ರಸ್ತೆ ಸುರಕ್ಷತೆಯ ಮೂಲ ನಿಯಮಗಳು ಗೊಂದಲವನ್ನು ತಪ್ಪಿಸುವುದು, ಸ್ಟಾಪ್ ಚಿಹ್ನೆಗಳು, ಕೆಂಪು ದೀಪಗಳಂತಹ ಸಂಚಾರ ಸಂಕೇತ ಪಾಲಿಸುವುದು, ಯುನಿಫಾವರ್i ಧರಿಸುವಿಕೆ, ಸೀಟ್‍ಬೆಲ್ಟ್, ಹೆಲ್ಮೆಟ್ ಧರಿಸುವುದು, ವೇಗದ ಮಿತಿ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಧ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಬೇಡಿ ಇತ್ಯಾದಿ ಹಲವು ನಿಯಮಗಳನ್ನು ಅತ್ಯಂತ ಮುಖ್ಯವಾದವುಗಳಾಗಿವೆ ಎಂದು ತಿಳಿಸಿದರು.

ಪಿಎಸ್‍ಐ ಆಶಾ ರಾಠೋಡ್ ಮಾತನಾಡಿ, ಜೀವನದಲ್ಲಿ ನಾವು ಇಡುವ ಪ್ರತಿಯೊಂದು ಹೆಜ್ಜೆಗೂ ನಿಯಮಗಳಿರುತ್ತವೆ. ಅದೇ, ರೀತಿ ರಸ್ತೆ ಸುರಕ್ಷತೆಗೆ ಕೆಲವು ನಿಯಮಗಳಿವೆ, ಮತ್ತು ವಾಹನ ಚಲಾಯಿಸುವಾಗ ನಮ್ಮನ್ನು ಸುರಕ್ಷಿತವಾಗಿಡಲು ಅವು ನಮಗೆ ಬಹಳ ಮುಖ್ಯ ಎಂದರು.

ಆಟೋ ಚಾಲಕರಾದ ಜ್ಞಾನೋಬಾ ಕಾಂಬಳೆ, ಹಣಮಂತ, ಅಮಜದ್, ಫರದೀನ್, ನಾಗನಾಥ, ಇಮ್ರಾನ್, ಮಹೇಶ, ರಾಮ, ಸುರಜ, ಪ್ರದೀಪ, ಫೀರೋಜ್, ಪ್ರಶಾಂತ, ಗೋವಿಂದ, ಸಾಗರ, ಸಂದೀಪ ಸೇರಿದಂತೆ ಪೆÇಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.