
ಕಲಬುರಗಿ,ಫೆ.25-ಮದುವೆ ಸಮಾರಂಭದಲ್ಲಿ ಕೈಯಲ್ಲಿ ಹರಿತವಾದ ಚಾಕು ಮತ್ತು ತಲವಾರ ಹಿಡಿದು ನೃತ್ಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುಮಗ ಸೇರಿ ಮೂವರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂಜಯ್, ರಾಜವರ್ಧನ್ ಮತ್ತು ತುಷಾರ ಬಂಧಿತರಾದ ಆರೋಪಿಗಳು.
ಇತ್ತೀಚೆಗೆ ಅಶೋಕನಗರ ಪೊಲೀಸ್ ಠಾಣೆಯ ಶಕ್ತಿ ನಗರದ ಕಲ್ಯಾಣ ಮಂಟಪದಲ್ಲಿ ನಡೆದ ತುಷಾರ ಎಂಬ ಯುವಕನ ಮದುವೆ ಸಮಾರಂಭದಲ್ಲಿ ಸಂಜಯ್ ಹಾಗೂ ರಾಜವರ್ಧನ್ ಅವರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ನೃತ್ಯ ಮಾಡಿದ್ದರು. ಕೈಯಲ್ಲಿ ಮಾರಕಾಸ್ತ್ರ ಹಿಡಿದು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲ ವೈರಲ್ ಆಗಿತ್ತು. ಈ ಸಂಬಂಧ ಆಯುಧ ಕಾಯ್ದೆ ಅಡಿಯಲ್ಲಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಮದುಮಗ ತುಷಾರ, ಸಂಜಯ್ ಹಾಗೂ ರಾಜವರ್ಧನ್ ಅವರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.































