
ಕಲಬುರಗಿ:ಮಾ.10:ಪ್ರಪಂಚದಲ್ಲಿ ಮಹಿಳಾ ಸಾಧಕರಿಗೇನೂ ಕೊರತೆ ಇಲ್ಲ, ಆದರೆ ಅವಕಾಶಗಳಿಂದ ವಂಚಿತರಾಗಿದ್ದಾರೆ ಎಂದು ಅಂಬಿಕಾ ರೆಡ್ಡಿ ಅಭಿಪ್ರಾಯಪಟ್ಟರು.
ನಗರದ ರಾಮ ಮಂದಿರ ಸಮೀಪವಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಪ್ರತಿ ಮನೆಯಲ್ಲೂ ಮಹಿಳೆಯ ನಿಸ್ವಾರ್ಥ ಸೇವೆಯಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಅವಳ ಕೊಡುಗೆ ಅಪಾರ. ದೇಶದ ಅತ್ಯುನ್ನತ ಹುದ್ದೆ ನಿಭಾಯಿಸುವ ಸಾಮಥ್ರ್ಯ ಅವಳಿಗಿದೆ, ಆದರೂ ಇನ್ನೂ ಅನೇಕ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆಯ ಕನಸು ಕನಸಾಗಿಯೇ ಉಳಿದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮಹಿಳಾ ಶಿಕ್ಷಕಿಯರನ್ನು ಹಾಗೂ ಸಿಬ್ಬಂದಿಯನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಕನ್ನಡ ಶಿಕ್ಷಕ ರಾಜು ರಾಠೊಡ್ ನಿರೂಪಿಸಿದರು. ಆನಂದ ಔರಾದಕರಸ್ವಾಗತಿಸಿದರು.ಗಣೇಶ ಜಾಧವ ವಂದಿಸಿದರು.


























