
ಕಲಬುರಗಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಇನ್ಸಿಟಿಟ್ಯೂಟ್ ಮ್ಯಾನೇಜ್‍ಮೆಂಟ್ ಕಮೀಟಿ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಸಹಯೋಗದಲ್ಲಿ ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ)ಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ)ಯ ಇನ್ಸಿಟಿಟ್ಯೂಟ್ ಮ್ಯಾನೇಜ್‍ಮೆಂಟ್ ಕಮೀಟಿ ಸದಸ್ಯರಾದ ಅರುಣಕುಮಾರ ಲೋಹಿಯಾ ಉದ್ಘಾಟಿಸಿದರು. ಡಾ.ರವಿಕಾಂತಿ ಎಸ್.ಕ್ಯಾತನಾಳ, ಭಾಗ್ಯಲಕ್ಷ್ಮೀ ಮೊಳಗಿ, ಮುಕ್ತಾ ಆರ್.ಜೆ., ನಾಗುಬಾಯಿ ಪಿ.ಸೂರ್ಯವಂಶಿ, ಅನಿಲಕುಮಾರ ರಾಠೋಡ್ ಇದ್ದರು.






















