
ಕರಜಗಿ: ಜೂ.13:ಮಕ್ಕಳ ಓದಿಗಾಗಿ ಶಾಲೆ ಕಟ್ಟಿದರಷ್ಟೇ ಸಾಲದು ಶಾಲೆಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ದವಾಗಬೇಕು ಆದರೆ ಹೊಸೂರ ಪ್ರೌಢ ಶಾಲೆಯಲ್ಲಿ 270 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಆದರೆ ಮಕ್ಕಳಿಗೆ ನಡೆದಿದ್ದೆ ದಾರಿ ಎಂಬುವಂತಾಗಿದೆ, ಏಕೆಂದರೆ ಸೂಕ್ತ ರಸ್ತೆ ಇಲ್ಲದೆ ನಿನ್ನೆ ಕೇಸರ ಗದ್ದೆಯಲ್ಲಿ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ವಿದ್ಯಾರ್ಥಿಗಳು ಪರದಾಡಿದ ಪ್ರಸಂಗ ನಡೆದಿದೆ.
ಗ್ರಾಮದಲ್ಲಿ ನಿನ್ನೆ ಸುರಿದ ಮಳೆಗೆ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಕೇಸರು ಗದ್ದೆಯಾಗಿ ಮಾರ್ಪಡಾಗಿತ್ತು ಮಕ್ಕಳು ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಕೇಸರಗದ್ದೆಯಂತಾದ ರಸ್ತೆಯಲ್ಲಿಯೇ ನಡೆದುಕೊಂಡು ಹೋದರು. ಇದರಿಂದ ಪ್ರತಿಸಲ ಮಳೆ ಬಂದರೆ ಸಾಕು ಶಾಲೆಗೆ ಹೋಗುವದು ಕಷ್ಟವಾಗುತ್ತದೆ, ದಾನವಾಗಿ ಶಾಲೆಗೆ ಸ್ಥಳ ಕೊಟ್ಟಿದ್ದರು ಸೂಕ್ತ ರಸ್ತೆಯಿಲ್ಲ ಎಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುವ ಆಶ್ವಾಸನೆ ನೀಡಿದ್ದಾರೆ.