
ತಾಳಿಕೋಟೆ:ಫೆ.೧೫: ವಿದ್ಯಾರ್ಥಿಗಳು ಜೀವನದಲ್ಲಿ ಛಲದೊಂದಿಗೆ ಗುರಿ ಎಂಬುದು ಇಟ್ಟುಕೊಂಡಿರಬೇಕು ತಂದೆ ತಾಯಿಯ ಪರಿಶ್ರಮವನ್ನು ಅರೀತುಕೊಂಡು ಮುನ್ನಡೆದರೆ ಸಾಧನೆಯ ಮೇಟ್ಟಿಲು ಹತ್ತಲು ಸಾಧ್ಯವಾಗಲಿದೆ ಎಂದು ಜೆಎಸ್‌ಜಿ ಪಿಯು ಕಾಲೇಜ್‌ನ ಉಪನ್ಯಾಸಕ ದಿನಕರ್ ಜೋಶಿ ಅವರು ಹೇಳಿದರು.
ಬುಧವಾರರಂದು ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ೨೦೨೫-೨೬ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ಘನಶ್ರೀ ಉತ್ಸವ ಕಲಾ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯು ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡಿದೆ ಈ ಭಾಗದ ಮಕ್ಕಳು ಬೇರೆ ಬೇರೆ ಜಿಲ್ಲೆಗಳಿಗೆ ಶಿಕ್ಷಣಕ್ಕಾಗಿ ಅಲೇದಾಡುವದನ್ನು ತಪ್ಪಿಸಲು ಡಾ.ಎಸ್.ಎಂ.ಸಜ್ಜನ ಅವರು ಈ ಸಂಸ್ಥೆಯನ್ನು ಕಟ್ಟಿದ್ದರ ಪರಿಣಾಮ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಈ ಭಾಗದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗುವಂತಹ ಕಾರ್ಯವನ್ನು ಮಾಡಿದ್ದಾರೆ ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಸಹ ನೀಡುವ ಕಾರ್ಯ ನಡೆದಿರುವದು ಮಕ್ಕಳ ಸಂಸ್ಕಾರಯುತ ಮಾತಿನಿಂದ ತಿಳಿದುಕೊಳ್ಳಬಹುದಾಗಿದೆ ಇಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಸ್ಥಾನದ ಮೇಟ್ಟಿಲು ಹತ್ತಬೇಕು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಲಕ್ಷ ಕೊಡಬೇಕು ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ನೀಡುವ ಶಿಕ್ಷಕರು ಆಯ್‌ಆಯ್‌ಟಿ ಕೋರ‍್ಸ್ಗಳು ಸಹ ಇರುವದರಿಂದ ಗುಣಮಟ್ಟದ ಶಿಕ್ಷಣ ಒದಗಿಸಲು ಸಾದ್ಯವಾಗಿದೆ ಇದರಿಂದ ಇಲ್ಲಿಯ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದ ಅವರು ಶ್ರೀ ಘನಶ್ರೀ ಕಲಾವೈಭವವು ಮಕ್ಕಳಿಗೆ ಪರಿಕ್ಷಾ ಸಮಯದಲ್ಲಿ ಓದಿನ ಒತ್ತಡದ ನಡುವೆಯೂ ಶಿಕ್ಷಣದ ಜೊತೆಗೆ ಮನಸ್ಸಿಗೆ ಹುಮ್ಮಸ್ಸುಕೊಡುವಂತದ್ದಾಗಿದೆ ಎಂದರು.
ಇನ್ನೋರ್ವ ರಾಯಚೂರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ತಿಮ್ಮಯ್ಯ ಶೆಟ್ಟಿ ಅವರು ಮಾತನಾಡಿ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯು ಈ ಭಾಗದ ಬಡ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವದಕ್ಕಾಗಿ ಹುಟ್ಟುಕೊಂಡಿದೆ ಉತ್ತಮ ಶಿಕ್ಷಣಕ್ಕೆ ಇಲ್ಲಿ ಕಲಿಯುತ್ತಿರುವ ಮಕ್ಕಳ ಉತ್ತಮ ಫಲಿತಾಂಶವೇ ಸಾಕ್ಷೀಕರಿಸುತ್ತಿದೆ ಉತ್ತಮ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ತೆರಳುವದನ್ನು ತಪ್ಪಿಸಿ ಒಡಲಂಚಿನಲ್ಲಿಯೇ ಒಳ್ಳೆಯ ಶಿಕ್ಷಣ ಕೊಡಬೇಕೆಂಬ ಸದ್ದಿಚ್ಚೆಯೊಂದಿಗೆ ಡಾ.ಎಸ್.ಎಂ.ಸಜ್ಜನ ಅವರು ಕಳೆದ ೨೫ ವರ್ಷಗಳ ಹಿಂದೆ ಪ್ರಾರಂಬಿಸಿದ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಲ್ಲುವದರೊಂದಿಗೆ ಪಾಲಕರಲ್ಲಿ ಉತ್ತಮ ಶಿಕ್ಷಣದ ವಿಸ್ವಾಸವನ್ನು ಮೂಡಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್‌ಎಂ ಸಜ್ಜನ್ ಅವರು ಮಾತನಾಡಿ ಮಕ್ಕಳ ಮನರಂಜನೆ ಪೋಷಕರ ಉತ್ಸಾಹ ಹಾಗೂ ಪ್ರೋತ್ಸಾಹ ಈ ಒಂದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿದೆ ಮಕ್ಕಳಿಗೆ ನಿತ್ಯ ಓದಿನ ಒತ್ತಡದ ನಡುವೆಯೂ ಕಲಾವೈಭವ ಕಾರ್ಯಕ್ರಮದಿಂದ ಖುಷಿಯನ್ನು ತಂದುಕೊಡಲಿದೆ ಈ ಘನಶ್ರೀ ಉತ್ಸವ ಕಲಾ ಹಬ್ಬದ ಯಶಸ್ಸಿಗೆ ಕಾರಣೀಭೂತರಾದ ಎಲ್ಲ ಪಾಲಕ ಬಂಧುಗಳಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮವನ್ನು ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಉದ್ಘಾಟಿಸಲಾಯಿತು.
ಈ ಸಮಯದಲ್ಲಿ ವೈಧ್ಯರಾದ ಡಾ. ನಜೀರ್ ಕೋಳ್ಯಾಳ ಗಣ್ಯ ವ್ಯಾಪಾರಸ್ಥರಾದ ಬಾಬು ಕಾರಜೋಳ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಾಲಾಜಿ ವಿಜಯಪುರ, ಸಂಸ್ಥೆಯ ಕಾಯದರ್ಶಿಗಳಾದ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಶ್ರೀಮತಿ ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿ.ಎಡ್ ಕಾಲೇಜ್ ಪ್ರಾಚಾರ್ಯ ಟಿ.ವ್ಹಿ ಶೆಟ್ಟಿ, ಶ್ರೀಮತಿ ಜಿ.ಎನ್.ಪಾಟೀಲ, ಬಸವರಾಜ ಸಜ್ಜನ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ಶಿಕ್ಷಕ ಕಲ್ಮೇಶ ಅವರು ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಅಮೃತಾ ಬೇನಾಳಮಠ ವಂದಿಸಿದರು.
ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.




























