ಡಾಂಬರ್ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0045,0.0000; brp_del_sen:0.1000,0.0000; motionR: null; delta:null; bokeh:0; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 110.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 43;

ಮಧುಗಿರಿ, ಅ. ೬- ತಾಲ್ಲೂಕಿನ ಕೊಡಿಗೇನಹಳ್ಳಿ ಭಾಗದ ಕೂಲಿ ಕಾರ್ಮಿಕರಿಗೆ ಮತ್ತು ರೈತರು ಪ್ರತಿನಿತ್ಯ ಕೃಷಿ ಚಟುವಟಿಕೆ ಹಾಗೂ ವಿದ್ಯಾಭ್ಯಾಸಕ್ಕೆ ಗ್ರಾಮದಿಂದ ತೆರಳಲು ಹರಸಾಹಸ ಪಡುತ್ತಿದ್ದು, ತುರ್ತಾಗಿ ಡಾಂಬರ್ ರಸ್ತೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.


ಹೋಬಳಿಯ ಸೂರನಾಗೇನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸೋರನಾಗೇನಹಳ್ಳಿ-ಕಾಳೆನಹಳ್ಳಿಗೆ ಹೋಗುವ ರಸ್ತೆ ಗುಣಿಗಳು ಬಿದ್ದಿದ್ದು ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು, ವಿದ್ಯಾರ್ಥಿಗಳು, ರೈತ ಕೂಲಿ ಕಾರ್ಮಿಕರು ಹಾಗೂ ಹಾಲು ಉತ್ಪಾದಕರು ಡೈರಿಗೆ ಹೋಗಬೇಕಾದರೆ ಕಷ್ಟ ಪಡಬೇಕಾಗುತ್ತದೆ ಎಂದು ಆರೋಪಿಸಿದರು.


ಈಗಾಗಲೇ ಇಲ್ಲಿನ ಸಮಸ್ಯೆ ಬಗ್ಗೆ ಶಾಸಕ ಕೆ.ಎನ್. ರಾಜಣ್ಣ ನವರ ಗಮನಕ್ಕೆ ತಂದಿದ್ದು ಶಾಸಕರು ಸುಮಾರು ೧ ಕೋಟಿ ರೂ. ವೆಚ್ಚದ ವಿಶೇಷ ಅನುದಾನದಡಿ ೧.೩ ಕಿಮಿ ರಸ್ತೆ ಡಿಪಿಆರ್ ಮಾಡಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ರಸ್ತೆಗೆ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ರೈತ ಮುಖಂಡ ಲಕ್ಷ್ಮಿನಾರಾಯಣ, ಆನಂದ, ಚೌಡಪ್ಪ, ನರಸಿಂಹಪ್ಪ, ರವಿ, ನಾಗರಾಜು, ನರಸಿಂಹಪ್ಪ ಎಸ್. ಸಂಜೀವಪ್ಪ, ಈಶ್ವರಪ್ಪ, ರಘು ಮತ್ತಿತರರು ಉಪಸ್ಥಿತರಿದ್ದರು.