(ಸಿಹಿಗುಂಬಳ) ಉಪಯೋಗಗಳು
ಕುಂಬಳಕಾಯಿಯಲ್ಲಿ ಎರಡು ವಿಧಗಳಿವೆ.ಕೆಂಪುಕುಂಬಳ ಮತ್ತು ಬಿಳಿಬಣ್ಣದ್ದು. ಕೆಂಪುಕುಂಬಳವನ್ನು ಸಿಹಿಗುಂಬಳಎಂದೂ,ಬಿಳಿಬಣ್ಣದ್ದನ್ನು ಬೂದುಗುಂಬಳ ಎಂದೂ ಕ-ರೆಯುತ್ತಾರೆ.
ಸಿಹಿಕುಂಬಳಕಾಯಿಯಲ್ಲಿತೇವಾಂಶ, ಸಸಾರಜನಕ, ಮೇದಸ್ಸು, ಖನಿಜಾಂಶ ಕಾರ್ಯೋಹೈಡ್ರೆಟ್ಸ್, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಷಿಯಂ, ಗಂಧಕ, ಕಬ್ಬಿಣ, ತಾಮ್ರ, ವಿಟಮಿನ್ ಎ, ಬಿ೧, ಬಿ೨, ಸಿ ಸಮೃದ್ಧಿಯಾಗಿದೆ. ಸಿಹಿಕುಂಬಳದಿಂದ ಪಲ್ಯ, ಹುಳಿ, ಕೂಟು,ಪಾಯಸ,ಬರ್ಫಿ, ಕೇಕ್, ರೊಟ್ಟಿ, ಗೊಜ್ಜು ಪದಾರ್ಥಗಳನ್ನು ಮಾಡಬಹುದು.
೧. ದೇಹಕ್ಕೆ ಪುಷ್ಠಿ: ಬಲಿತು ಹಣ್ಣಾಗಿರುವ ಸಿಹಿಕುಂಬಳಕಾಯಿ ಹೆಚ್ಚು ರುಚಿಕರ ಹಾಗೂ ಇದು ವೀರಗಳನ್ನು ವೃದ್ಧಿಸುವುದು. ಮಲಮೂತ್ರಗಳನ್ನು ಸಡಿಲಪಡಿಸುವುದು.ಪಿತ್ತವಿಕಾರ, ಮೂಲವ್ಯಾಧಿ, ಹೊಟ್ಟೆ ಉಬ್ಬರ, ರಕ್ತವಿಕಾರವನ್ನು ಗುಣಪಡಿಸುತ್ತದೆ.
೨. ಸಿಹಿಕುಂಬಳಕಾಯಿಯ ಬೀಜ:ಸಿಹಿಕುಂಬಳಕಾಯಿಯ ಬೀಜ ಹೆಚ್ಚು ರುಚಿಕರ ಮತ್ತು ಪುಷ್ಠಿಕರ, ಹೃದಯ ಮತ್ತು ಮೆದುಳಿಗೆ ವಿಶೇಷ ಬಲವನ್ನು ಕೊಡುತ್ತದೆ. ಹೃದಯಮತ್ತು ಮೆದುಳಿನ ದುರ್ಬಲತೆ ಇರುವವರು ಸತತವಾಗಿ ಬೀಜವನ್ನು ತಿನ್ನುವುದರಿಂದ ಅಥವಾಬೀಜವನ್ನು ಹಾಲಿನಲ್ಲಿ ಅರೆದು ಕುಡಿಯುವುದರಿಂದ ತುಂಬಾ ಲಾಭ ತರುವುದು.
೩. ಮಾನಸಿಕದೌರ್ಬಲ್ಯ ಇದರ ಬೀಜದ ಚೂರ್ಣವನ್ನು ಜೇನಿನೊಡನೆ ಸೇವಿಸುತ್ತಿದ್ದರೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹೆಚ್ಚುಮೆದುಳಿಗೆ ಕೆಲಸ ಕೊಟ್ಟು ಕಾರ್ಯನಿರ್ವಹಿಸುವವರಿಗೆ ಈ ಬೀಜದ ಪುಡಿ ತುಂಬಾ
ಸಹಕಾರಿ.
೪. ಸಿಹಿಕುಂಬಳಕಾಯಿಯ ಬೀಜ ತೆಳ್ಳಗಿರುವವರಿಗೆ: ಹಾಗೂಬಾದಾಮಿಯನ್ನು ಅರೆದು ಜೇನಿನೊಡನೆ ಸೇವಿಸುತ್ತಿದ್ದರೆ, ಶರೀರದ ತೂಕ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
೫. ಸುಟ್ಟಗಾಯಗಳಿಗೆ ಸಿಹಿಕುಂಬಳ ಕಾಯಿಯ ಎಲೆಯರಸವನ್ನು ಸುಟ್ಟಗಾಯಕ್ಕೆ ಲೇಪಿಸುವುದರಿಂದ ಉರಿ ಕಡಿಮೆಯಾಗುತ್ತದೆ.
೬.ಹುಳುಕಚ್ಚಿದಾಗ:ಸಿಹಿಕುಂಬಳ ಕಾಯಿಯತೊಟ್ಟನ್ನು ನೀರಿನಲ್ಲಿ ತೇಯ್ದು ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ, ನೋವು ಹಾಗೂ ಕೆರೆತ ಕಡಿಮೆಯಾಗುತ್ತದೆ.
೭. ಜಂತುಹುಳುಗಳ ನಿವಾರಣೆಗೆ: ಹೊಟ್ಟೆಯ ಒಳಗೆ ಇರುವ ಜಂತುಹುಳುಗಳ ನಿವಾರಣೆಗೆ ಸಿಹಿಕುಂಬಳಕಾಯಿಯ ಬೀಜಗಳನ್ನು ರಸ ಜಜ್ಜಿ ತೆಗೆದು ಕುಡಿದರೆ, ಜಂತುಹುಳುಗಳುಮೂತ್ರದ ಜೊತೆಗೆ ಹೊರಹೋಗುತ್ತವೆ.
೮. ಕುರು ಆದಾಗ: ದೇಹದ ಯಾವುದೇ ಭಾಗದಲ್ಲಿ ಕುರು ಆದರೂ ಆ ಸ್ಥಳಕ್ಕೆ ಸಿಹಿಕುಂಬಳಕಾಯಿಯ ಎಲೆಯನ್ನು ಬಿಸಿಮಾಡಿ ಕಟ್ಟಿದರೆ ಕುರು ಒಡೆದು ಕೀವು ಹೊರಬಂದು, ಗಾಯ ಮಾಯುತ್ತದೆ.
೯. ಮೂತ್ರಪಿಂಡಗಳ ಆರೋಗ್ಯ ಸಿಹಿ ಕುಂಬಳಕಾಯಿಯ ಒಳಗಿನ ಮೂತ್ರಪಿಂಡಗಳ ಆರೋಗ್ಯ ಹಾಗೂ ರಕ್ಷಣೆಗೆ ಸಹಾಯಕವಾಗುವುದು.
೧೦. ಜೀರ್ಣಶಕ್ತಿ: ಸಿಹಿಕುಂಬಳ ಕಾಯಿಯ ಎಲೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಜೀರ್ಣಶಕ್ತಿಯು ವೃದ್ಧಿಸುತ್ತದೆ.
೧. ಗೌರಮ್ಮನ ಆರೋಗ್ಯಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್‌ವತಿಯಿಂದ ಪ್ರಕಟಣೆ ೨.ಡಾ.ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತುಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ
. ೯೫೩೫೩೮೩೯೨೧























