ಪ್ರೇಮಿಗಳ ದಿನಾಚರಣೆ: ಕೆಂಪು ಗುಲಾಬಿಗೆ ಭಾರೀ ಬೇಡಿಕೆ

ಬೆಂಗಳೂರು,ಫೆ. ೧೩ – ನಾಳೆ ೧೪ ವಿಶ್ವದೆಲ್ಲೆಡೆ ವ್ಯಾಲೆಟೈನ್ಸ್ ಡೇ..ಫ್ರೇಮಿ ತನ್ನ ಪ್ರೇಮ ನಿವೇದನಗೆ ರೆಡ್ ರೋಸ್ ಕೊಟ್ಟು ಪ್ರೋಪೋಸ್ ಮಾಡುವ ಅಚಾರಣೆ..ಈ ಪ್ರೇಮಿಗಳ ಹಬ್ಬಕ್ಕೆ ಕೆಂಪು ಗುಲಾಬಿಗೆ ಬಾರಿ ಬೇಡಿಕೆ ಹೆಚ್ಚಾಗಿದ್ದು ಈ ಬಾರಿ ರೆಡ್ ರೋಸ್ ಗೆ ಮಲೇಶಿಯಾ. ಇಂಡೋನೇಷ್ಯಾ. ಆಸ್ಟ್ರೇಲಿಯಾ.

ಅಮೆರಿಕಾ ಸೇರಿದಂತೆ ಹಲವು ದೇಶಗಳಿಗೆ ರೆಡ್ ರೋಸ್ ರಫ್ತು ವಹಿವಾಟು ಜೋರಾಗಿದೆ.ನಗರದ ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಘಟಕದಲ್ಲಿ ಕಳೆದ ೫ ವರ್ಷಗಳಿಗಿಂತ ಈ ವರ್ಷ ಬಾರಿ ವ್ಯಾಪಾರ ವಹಿವಾಟು ನಡೆದಿದೆ ಅಂತ ಹರಾಜು ಘಟಕದ ಮುಖ್ಯಸ್ಥರು ಮಾಹಿತಿ ನೀಡಿದರೆ.


ಕಳೆದ ಮೂರು ದಿನಗಳಿಂದ ಸುಮಾರು ಮೂರು ಕೋಟಿಗೂ ಅಧಿಕ ರೆಡ್ ರೋಸ್ ಗಳು ವಿದೇಶಗಳಿಗೆ ರಫ್ತು ಅಗಿದೆ..ಇನ್ನೂ ೧೦ ರೂ ಗೆ ಸಿಗುತ್ತಿದ ಒಂದು ರೆಡ್ ರೋಜ್ ಈಗ ೩೦-೪೦ ರೂಪಾಯಿಗೆ ರಫ್ತು ಅಗ್ತಿದೆ.

ಇಂದು ಕೂಡ ಸುಮಾರು ೨೦ ಲಕ್ಷ ಕೆಂಪು ಗುಲಾಬಿ ವಿದೇಶಗಳಿಗೆ ರಫ್ತು ಅಗಿದೆ. ಈ ಬಾರಿ ರೈತರು ಬೆಳೆದ ರೋಜಾ ಹೂಗಳಿಗೆ ಬೇಡಿಕೆ ಹೆಚ್ಚಿದ್ದು.ರೈತರು ಕೂಡ ಗರಿಷ್ಟ ಮಟ್ಟದ ಲಾಭ ಗಳಿಸಿದರೆ..

ಪ್ರಮುಖವಾಗಿ ಬೆಂಗಳೂರಿನ ನೆಲಮಂಗಲ.ಅನೇಕಲ್ಲು.ಬಿಡದಿ. ಹೊಸಕೋಟೆ. ಕೋಲಾರ ಭಾಗದ ರೈತರು ಕೆಲವು ಗುಲಾಬಿ ಗಳನ್ನು ಬೆಳೆದು ವ್ಯಾಪಾರಕ್ಕೆ ತಂದಿದರು.ಕೇಲವೆ ನಿಮಿಷಗಳಲ್ಲಿ ಅನ್ ಲೈನ್ ಮುಖೇನ ಎಲ್ಲಾ ಹೂಗಳು ವಿದೇಶಿಗಳಿಗೆ ಬಾರಿ ಮೊತ್ತಕ್ಕೆ ವ್ಯಾಪಾರ ಆಯಿತು..ಇನ್ನೂ ದೆಹಲಿ.

ಮುಂಬಯಿ. ಕಲ್ಕತ್ತಾ .ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಗೂ ಬೆಂಗಳೂರಿನಿಂದ ಕೆಂಪು ಗುಲಾಬಿ ರಫ್ತು ಅಗಿದೆ..ಪ್ರಮುಖವಾಗಿ ತಾಜ್ ಮಹಲ್ ರೋಸ್ ಗೆ ಹೆಚ್ಚು ಬೇಡಿಕೆ ಇದ್ದು.ಸಿಲಿಕಾನ್ ಸಿಟಿ ಮಂದಿ ಅನ್ ಲೈನ್ ಮುಖೇನ ತಮ್ಮ ಪಾರ್ಚೆಸ್ ಮಾಡುತ್ತಿದರೆ ಅಂತ ಮಾಹಿತಿ ನೀಡಿದರು..