Home ಜಿಲ್ಲೆ ಯುಪಿಎಸ್‌ಸಿ ಸಾಧಕ ಸಂದೀಪ್‌ಗೆ ಅದ್ದೂರಿ ಸನ್ಮಾನ

ಯುಪಿಎಸ್‌ಸಿ ಸಾಧಕ ಸಂದೀಪ್‌ಗೆ ಅದ್ದೂರಿ ಸನ್ಮಾನ

ಯಾದಗಿರಿ:ಮಾ.೧೦:ಯುಪಿಎಸ್‌ಸಿ ಪರೀಕ್ಷೆಯಲ್ಲಿ ೮೨ನೇ ರ‍್ಯಾಂಕ್ ಪಡೆದು ಜಿಲ್ಲೆಯ ಹೆಮ್ಮೆಯ ಸಾಧನೆ ಮಾಡಿದ ನಗರದ ಪುತ್ರ ಸಂದೀಪ್ ಬಾಡದ್ ಅವರಿಗೆ ಸೋಮವಾರ ಸಂಜೆ ನಗರದಲ್ಲಿ ಭವ್ಯವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.

ದೆಹಲಿ ಯಿಂದ ನೇರವಾಗಿ ನಗರಕ್ಕೆ ಆಗಮಿಸಿದ ಸಂದೀಪ್ ಅವರನ್ನು ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಕುಟುಂಬಸ್ಥರು ಉತ್ಸಾಹದಿಂದ ಬರಮಾಡಿಕೊಂಡು ಭವ್ಯ ಮೆರವಣಿಗೆ ನಡೆಸಿದರು. ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ ಬಳಿಕ ಗಾಂಧಿ ಚೌಕ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಗ್ರಾಮೀಣ ಪ್ರದೇಶದಿಂದ ಬಂದ ಯುವಕನಾದ ಸಂದೀಪ್ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಯುಪಿಎಸ್‌ಸಿ ಯಲ್ಲಿ ಯಶಸ್ಸು ಸಾಧಿಸಿರುವುದು ಜಿಲ್ಲೆಯ ಯುವಕರಿಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಹೇಳಿದರು.

ಸಂದೀಪ್ ಅವರ ಸಾಧನೆಯನ್ನು ಎಲ್ಲರೂ ಕೊಂಡಾಡಿ, ಮುಂದಿನ ದಿನಗಳಲ್ಲಿ ಉತ್ತಮ ಆಡಳಿತಾಧಿಕಾರಿಯಾಗಿ ಜನಸೇವೆ ಮಾಡಲು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗರದ ಅನೇಕ ಮುಖಂಡರು, ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.