Home ಜಿಲ್ಲೆ ಮನುಕುಲದ ಉದ್ಧಾರವೇ ಧರ್ಮದ ಮೂಲ ಸಂದೇಶ

ಮನುಕುಲದ ಉದ್ಧಾರವೇ ಧರ್ಮದ ಮೂಲ ಸಂದೇಶ

ಸೈದಾಪುರ:ಮಾ.೧೦: ಮಾನವ ಕುಲವನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುವುದೆ ಮಾನವ ಧರ್ಮ ಎಂದು ತಿಳಿಸಿದ ರೇಣುಕಾಚಾರ್ಯರ ಸಂದೇಶವನ್ನು ಸರ್ವರು ಪಾಲಿಸಬೇಕೆಂದು ಹೆಡಗಿಮದ್ರದ ಶಾಂತ ಶಿವಯೋಗಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ವೀರ ಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘ ಸೈದಾಪುರವತಿಯಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಧರ್ಮ ಸಭೆಯಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು. ಜಗತ್ತಿನ ಯಾವ ಧರ್ಮವು ಬೋಧಿಸಿರದ, ಯಾವ ಜನಾಂಗಕ್ಕೂ ಸೀಮಿತವಾಗಿರದೆ ಸರ್ವರಿಗೂ ಒಳಿತನ್ನು ಬಯಸುವ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಂದೇಶ ನೀಡಿರುವ ಏಕೈಕ ತಪಸ್ವಿ ಶ್ರೀ ರೇಣುಕಾಚಾರ್ಯರಾಗಿದ್ದಾರೆ. ಧರ್ಮ ಕಾರ್ಯಕ್ರಮಗಳ ಮೂಲಕ ಧರ್ಮದ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಭಕ್ತರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ರಾಯಚೂರು ಸೋಮವಾರಪೇಟೆ ಹಿರೇಮಠದ ಪೀಠಾಧಿಪತಿ ಅಭಿನವ ರಾಚೋಟಿವೀರ ಶಿವಚಾರ್ಯ ಸ್ವಾಮಿ ಮಾತನಾಡಿ, ದೀಪ ಆರಿಸುವ ಸಂಸ್ಕೃತಿ ನಮ್ಮದ್ದಲ್ಲ, ಮನೆ-ಮನಗಳಲ್ಲಿ ದೀಪವನ್ನು ಬೆಳಗಿಸುವ ಸಂಸ್ಕಾರ ನಮ್ಮದ್ದಾಗಿದೆ. ಸ್ವಧರ್ಮ ಪರಿಪಾಲನೆಗಾಗಿ ಜನಿಸಿ ಬಂದ ರೇಣುಕಾಚಾರ್ಯರ ತತ್ವಗಳನ್ನು ಪಾಲಿಸಿಕೊಂಡು ಬದುಕಿದಾಗ ಹೆತ್ತ-ತಂದೆತಾಯಿಗಳಿಗೆ ಕೀರ್ತಿ ಬರುತ್ತದೆ. ಮಹಾತ್ಮರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಇಂತಹ ಜಯಂತಿಗಳು ಸಾರ್ಥಕತೆಯನ್ನು ಪಡೆದುಕೊಳ್ಳುತ್ತವೆ ಎಂದರು.

ಈ ವೇಳೆ ಚನ್ನವೀರ ಶಿವಾಚಾರ್ಯ ಬಾಡಿಯಾಳ, ಗುರುಮೂರ್ತಿ ಶಿವಾಚಾರ್ಯ ಕಡೇಚೂರು, ಶಂಭು ಸೋಮನಾಥ ಶಿವಾಚಾರ್ಯ ಸುಲ್ತಾನಪೂರ, ಸಿದ್ದರಾಮ ದೇವರು ಕೌಳೂರು, ಡಾ. ಕ್ಷೀರಲಿಂಗಸ್ವಾಮಿ ಚೇಗುಂಟ, ಸಿದ್ಧಚೇತನಾಶ್ರಮ ಸಿದ್ಧರೂಢ ಮಠದ ಪೀಠಾಧಿಪತಿ ಸೋಮೇಶ್ವರನಂದಶ್ರೀ, ಬಸವರಾಜಯ್ಯಸ್ವಾಮಿ ಬದ್ದೇಪಲ್ಲಿ, ಬಸವರಾಜಪ್ಪಗೌಡ ಮಾ.ಪಾಟೀಲ ಗೊಂದಡಿಗಿ, ರಾಚಣ್ಣಗೌಡ ಮುದ್ನಾಳ್, ಶರಣಯ್ಯಸ್ವಾಮಿ ಪಂಚಕAತಿಮಠ ಕೊಂಡಾಪುರ, ಭೀಮಣ್ಣಗೌಡ ಕ್ಯಾತ್ನಾಳ, ವಿವಿಧ ಗ್ರಾಮಗಳ ವೀರ ಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸಮಾಜದ ಬಂಧುಗಳು, ಸದಸ್ಯರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇತರರಿದ್ದರು. ಕರಬಸಯ್ಯ ದಂಡಗಿಮAಠ ನಿರೂಪಿಸಿ ವಂದಿಸಿದರು.

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿ: ನಮ್ಮ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವ ಭರಾಟೆಯಲ್ಲಿ ಈ ನೆಲಧರ್ಮದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮರೆತಿದ್ದೇವೆ. ಇದರಿಂದಾಗಿ ಸಮಾಜದಲ್ಲಿ ದುಷ್ಕೃತ್ಯಗಳು ಜರುಗುತ್ತಿವೆ. ಆದ್ದರಿಂದ ನಾವೆಲ್ಲರು ಧರ್ಮದ ರಕ್ಷಣೆಗಾಗಿ ಸಂಘಟಿತರಾಗಿ, ಮಕ್ಕಳನ್ನು ಮಠ-ಮಂದಿರಗಳಿಗೆ ಕಳಿಸುವ ಮೂಲಕ ಉತ್ತಮ ಸಂಸ್ಕಾರವAತರನ್ನಾಗಿ ಮಾಡುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ.
ಅಭಿನವ ರಾಚೋಟಿವೀರ ಶಿವಾಚಾರ್ಯ ರಾಯಚೂರು