
ಮುಂಬೈ,ಅ.೩- ಬಹುತೇಕ ಜನರು ನನ್ನನ್ನು ಬಾಲಿವುಡ್ ನಟ ರಿಷಿ ಕಪೂರ್ ಅವರಿಗೆ ಜನಿಸಿದ ಅಕ್ರಮ ಮಗಳು ಎಂದು ಭಾವಿಸಿದ್ದರು ಎನ್ನುವ ಸಂಗತಿಯನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಹೇಳಿದ್ದಾರೆ. ಅವರ ಈಹೇಳಿಕೆ ಸಾಮಾಜಿಕ ಜಾಲತಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಾಲಿವುಡ್ ನಟ ರಾಜೇಶ್ ಖನ್ನಾ ಮತ್ತು ನಟಿ ಡಿಂಪಲ್ ಕಪಾಡಿಯಾ ಪುತ್ರಿಯಾಗಿರುವ ಲೇಖಕಿ ಟ್ವಿಂಕಲ್ ಖನ್ನಾ, ಜನರು ನನ್ನನ್ನು ರಿಷಿ ಕಪೂರ್ ಅವರಿಗೆ ಜನಿಸಿದ ಅಕ್ರಮ ಮಗಳು ಎಂದೇ ಭಾವಿಸಿದ್ದರು. ನಾನೂ ಒಂದು ರೀತಿ ಕಪೂರ್ ಕುಟುಂಬದ ಕುಡಿಯಾಗಿದ್ದೆ ಎಂದಿದ್ದಾರೆ.
ನಟಿ ಆಲಿಯಾ ಭಟ್ ಮತ್ತು ನಟ ವರುಣ್ ಧವನ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಅವರ್ ಟು ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್ ಟಾಕ್ ಶೋನ ಹೊಸ ಸಂಚಿಕೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದಾರೆ.
ವರ್ಷಗಳ ಹಿಂದೆ ರಿಷಿ ಕಪೂರ್ ಅವರ ಹುಟ್ಟುಹಬ್ಬದ ಟ್ವೀಟ್ ಮಾಡಿದ್ದಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ತಮ್ಮನ್ನು ಅವರ ಅಕ್ರಮ ಮಗಳು ಕರೆದಿದ್ದರು.ಅದಕ್ಕೆ ಕಾರಣವೂ ಇದೆ..ತಾಯಿ ಡಿಂಪಲ್ ಕಪಾಡಿಯಾ ಗರ್ಭಾವಸ್ಥೆಯಲ್ಲಿದ್ದ ಅವಧಿಯಲ್ಲಿ ರಿಷಿ ಕಪೂರ್ ಜೊತೆ ಚಿತ್ರೀಕರಣ ಮಾಡುತ್ತಿದ್ದಾಗ ಭಾವಚಿತ್ರ ಹಂಚಿಕೊಂಡಿದ್ದೇ ಈ ರೀತಿಯ ಗೊಂದಲಗಳಿಗೆ ಕಾರಣವಾಗಿತ್ತು ಎಂದಿದ್ದಾರೆ.
ನಟಿ “ಆಲಿಯಾ ಭಟ್ ಅವರ ಮಾವ ರಿಷಿ ಕಪೂರ್ ಅವ ಕಾರಣದಿಂದ ನಾನು ಬಹುತೇಕ ಕಪೂರ್ ಆಗಿದ್ದೆ ಎಂದು ಟ್ವಿಂಕಲ್ ತಮಾಷೆ ಮಾಡಿದ್ದಾರೆ.
ನನ್ನ ಹುಟ್ಟುಹಬ್ಬದಂದು, ಅವರು ಟ್ವೀಟ್ ಮಾಡಿ ‘ಓಹ್, ನಿನಗೆ ಗೊತ್ತಾ.. ನೀನು ನಿನ್ನ ತಾಯಿಯ ಹೊಟ್ಟೆಯಲ್ಲಿದ್ದಾಗ, ನಾನು ಅವರೊಂದಿಗೆ ಡುಯೆಟ್ ಹಾಡಿದ್ದೆ ಎಂದು ಅವರು ತಮ್ಮ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿದ್ದರು’ ಎಂದು ಹಳೆಯ ವಿಷಯವನ್ನು ನೆನಪು ಮಾಡಿಕೊಂಡಿದ್ದಾರೆ.
ಈ ಹಾಸ್ಯಮಯ ತಪ್ಪು ತಿಳುವಳಿಕೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಾಲೆಳೆಯುವ ಹಂತಕ್ಕೆ ಹೋಗಿತ್ತು. ರಿಷಿ ಕಪೂರ್ ಸ್ವತಃ ಮಧ್ಯಪ್ರವೇಶಿಸಿ ತಮ್ಮ ಹೇಳಿಕೆಗೆ ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.