Home ಜಿಲ್ಲೆ ಕಲಬುರಗಿ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳು ಜೀವನದಲ್ಲಿ ಶ್ರಮ ಪಡಬೇಕು

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳು ಜೀವನದಲ್ಲಿ ಶ್ರಮ ಪಡಬೇಕು

ಜೇವರಗಿ,ಮಾ.10: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳೇ ಜೀವನದಲ್ಲಿ ಶ್ರಮ ಪಡಬೇಕು, ಯಶಸ್ಸಿನ ಮೂಲ ಮಂತ್ರವೇ ಪರಿಶ್ರಮ ನಮ್ಮ ಕರ್ನಾಟಕ ಸರ್ಕಾರವು ಮೊನ್ನೆ ಮಂಡಿಸಿದ ಬಜೆಟ್ ನಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ನ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧ ಮಾಡಲಾಗಿದ್ದು ಅತ್ಯುತ್ತಮ ನಿರ್ಧಾರವನ್ನು ಕೈಗೊಂಡಿದೆ ಮಕ್ಕಳಿ ಮೊಬೈಲನ್ನು ಬಿಡಿ ಪುಸ್ತಕವನ್ನು ಕೈಯಲ್ಲಿ ಹಿಡಿಯಿರಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ ಹಿರಿಯ ಮುಖಂಡ ರಾಜಶೇಖರ್ ಸೀರಿ ಅವರು ಮಾತನಾಡಿದರು ಪಟ್ಟಣದ .ಬಿ.ಆರ್ ಪಾಟೀಲ್ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಸೇಂಟ್ ಚಾನ್ಸ್ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ 27ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕನ್ನಡಪರ ಹಿರಿಯ ಹೋರಾಟಗಾರ ಶಂಕರಗೌಡ ಪಾಟೀಲ್ ಹಾಲಗಡ್ಲ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಸ್ ಕೆ ಬಿರಾದರ್, ಕೋಲಿ ಸಮಾಜ ಅಧ್ಯಕ್ಷ ಮೈಲಾರಿ ಗುಡೂರ್, ಕರ್ನಾಟಕ ರಾಜ್ಯ ನೌಕರ ಸಂಘದ ಉಪಾಧ್ಯಕ್ಷ ನಿಜಲಿಂಗಪ್ಪ ಮಾನ್ವಿ, ಪುರಸಭೆ ಸದಸ್ಯ ದೊಡ್ಡೇಶ್ ಕೊಂಬಿನ್, ಪ್ರಗತಿಪರ ಚಿಂತಕ ಭಗವಂತರಾಯ್ ಬೆಣ್ಣೂರ್, ಕರವೇ ತಾಲೂಕು ಕಾರ್ಯದರ್ಶಿ ಬಿ.ಹೆಚ್ ಮಾಲಿಪಾಟೀಲ್, ತಾಲೂಕ ಕುರುಬ ಸಮಾಜ ಕಾರ್ಯದರ್ಶಿ ನಿಂಗಣ್ಣ ರದ್ದೇವಾಡಗಿ, ತಾಪಂ ಮಾಜಿಸದಸ್ಯ ಮಾಂತೇಶ್ ಪವಾರ್, ಟಿಪ್ಪು ಸುಲ್ತಾನ್ ಕಮಿಟಿ ತಾಲೂಕು ಅಧ್ಯಕ್ಷ ಮೋಹಿಯೋದ್ದಿನ್ ಇನಾಮ್ದಾರ್, ಶ್ರೀ ಮಹಾಲಕ್ಷ್ಮೀ ಕಂಪ್ಯೂಟರ್ ಕಿಯೋನಿಕ್ಸ್ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರಯ್ಯ ಹಿರೇಮಠ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಮರೆಪ್ಪ ಬೇಗಾರ್, ವಿಜಯಕುಮಾರ್ ಕಲ್ಲಾ, ಸುರೇಶ್ ಕುಮಾರ್ ಹಿರೇಮಠ್, ಮಲ್ಲಿಕಾರ್ಜುನ್ ಬೂದಿಹಾಳ ಭಾಗವಹಿಸಿದ್ದರು.
ಪ್ರಗತಿಪರ ಚಿಂತಕ ಭಗವಂತರಾಯ್ ಬೆಣ್ಣೂರು, ನಿಂಗಣ್ಣ ರದ್ದೆವಾಡಗಿ,ಮೋಹಿಯೋದ್ದಿನ್ ಇನಾಮ್ದಾರ್, ನಿಜಲಿಂಗಪ್ಪ ಮಾನ್ವಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಬಿ ಆರ್ ಪಾಟೀಲ್ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಅಪೂರ್ವ ಎಸ್ ಹಳ್ಳಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಸೆಂಟ್ ಜಾನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆ ಸುಧಾ ಬಿ ಬೆಣ್ಣೂರ್ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದದ್ದಕ್ಕಾಗಿ ಶಾಲೆಯ ಅಧ್ಯಕ್ಷರು ಕಾರ್ಯದರ್ಶಿಗಳು ಸನ್ಮಾನಿಸಿ ಗೌರವಿಸಿದರು.
ಶಾಲೆಯ ಅಧ್ಯಕ್ಷ ಬಲವಂತ್ರಾಯ ಆರ್ ಮಾಲಿ ಪಾಟೀಲ್ ಅಧ್ಯಕ್ಷತೆಯನ್ನು, ಕಾರ್ಯದರ್ಶಿಗಳಾದ ಭಾರತಿ ಬಿ ಪಾಟೀಲ್ ವಾರ್ಷಿಕ ವರದಿಯನ್ನು ಸ್ವಾಗತ ಗೀತೆ ಶ್ರೀಜಾ ಹಾಗೂ ಸಂಗಡಿಗರು, ವಚನ ನೃತ್ಯವನ್ನು ವೈಷ್ಣವಿ, ಸ್ವಾಗತವನ್ನು ಸಂತೋಷ್ ದೊಡ್ಡಮನಿ, ನಿರೂಪಣೆಯನ್ನು ಶ್ರೀ ದೇವಿ ಸಗರ್, ಶ್ರೇಯಸ್ ಬಿ ಬೆಣ್ಣೂರ್, ವಂದನಾರ್ಪಣೆಯನ್ನು ಸಿಮ್ರಾನ್ ಭಗವಾನ್ ನೆರವೇರಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಶಾಲೆಯ ತರಗತಿಯ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯ ಸಹ ಶಿಕ್ಷಕಿಯರಾದ ವಿಜಯಲಕ್ಷ್ಮೀ ಎನ್ ಮಠಪತಿ,ರುಕಯ್ಯಾ ಭಾಗವಹಿಸಿದ್ದರು.