ಕಲಬುರಗಿ:ಜು.03: ದೇಶದ ಅಭಿವೃದ್ದಿಗೆ ಹಾಗೂ ಸಮೀಕ್ಷೆ ಕಾರ್ಯಗಳನ್ನು ಮಾಡಬೇಕಾದರೆ ಮತು ನಿಖರವಾದ ಅಂಕಿಅಂಶಗಳನ್ನು ಪಡೆಯಬೇಕಾದರೆ ಸಂಖ್ಯಾ ಸಂಗ್ರಹಣಾ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿಯವರು ಅವರು ಹೇಳಿದರು.
ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿಯ ಸಂಖ್ಯಾ ಸಂಗ್ರಹಣಾಧಿಕಾರಿಗಳ ಇಲಾಖೆಯಲ್ಲಿ ಪಿ.ಸಿ ಮಹಲನೋಬಿಸ್ ಅವರ ಸಾಂಖ್ಯಿಕ ತಜ್ಞರ ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡಿ ಉದ್ಫಾಟಿಸಿ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ದಿಗೆ ಮತ್ತು ಸಂಖ್ಯಾಶಾಸ್ತ್ರಕ್ಕೆ ಅವರು ಬಹಳಷ್ಟು ಕೊಡುಗೆಯನ್ನು ದೇಶಕ್ಕೆ ನೀಡಿದ್ದಾರೆ ಎಂದರು.
ಪಂಚವಾರ್ಷಿಕ ಯೋಜನೆಯ ಮುಖಾಂತರ ದೇಶದ ಅಬಿವೃದ್ದಿ ಸಾದ್ಯವಿದೆ ಎಂದು ಹೇಳಿದವರು ಮಹ¯ನೋಬಿಸ್ ನಮಗೆ ಅನ್ನವನ್ನು ನೀಡಿದ ಇಲಾಖೆಯಲ್ಲಿ ನಾವು ವಹಿಸಿಕೊಂಡ ಜವಾಬ್ದಾರಿಯುತವಾದ ಅಧಿಕಾರವನ್ನು ಪ್ರಾಮಾಣೀಕತೆಯಿಂದ ನಿರ್ವಹಿಸಿ ದೇಶದ ಅಭಿವೃದ್ದಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ಅವರು ಹೇಳಿದರು.
ಪಿ.ಸಿ ಮಹಲನೋಬಿಸವರು 1893 ಜೂನ್ 29 ರಂದು ಜನಿಸಿದರು. ಇವರು ಭಾರತೀಯ ವಿಜ್ಞಾನಿ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರಜ್ಞರಾಗಿದ್ದರು.ಸ್ವತಂತ್ರ ಭಾರತದ ಪ್ರಥಮ ಯೋಜನಾ ಆಯೋಗದ ಸದಸ್ಯರಾಗಿದ್ದರು. ಇವರು 1932 ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು. 2007 ರಿಂದ ಇವರು ಹುಟ್ಟಿದ ದಿನವನ್ನು ರಾಷ್ಟ್ರೀಯ ಸಾಂಖಿಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಲಬುರಗಿಯ ಲೆಕ್ಕ ಪರಿಶೋದನೆ ಮತ್ತು ಸಹಕಾರ ಸಂಘಗಳ ಉಪನಿರ್ದೇಶಕ ಸುಭಾಷಚಂದ್ರ ಎಸ್.ಬರ್ಮಾ ಅವರು ಮಾತನಾಡಿ, ಮನುಷ್ಯ ತನ್ನ ಆಸಕ್ತಿಯಿಂದ ಜೀವನದಲ್ಲಿ ಏನಾದರು ಸಾಧನೆಮಾಡಬಲ್ಲರು ಎಂಬುದಕ್ಕೆ ಪಿ.ಸಿ ಮಹಲನೋಬಿಸ್‍ರವರು ನಿದರ್ಶನವಾಗಿದೆ ಎಂದು ಅವರು ಹೇಳಿದರು.
ಸಂಖ್ಯಾಶಾಸ್ತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದಕ್ಕಾಗಿಯೆ ಇವರ ಜನ್ಮ ದಿನವನ್ನು ಸಂಖ್ಯಾಶಾಸ್ತ್ರೀಯ ದಿನವನ್ನಾಗಿ ಆಚರಿಲಾಗುತ್ತಿದೆ.ಇವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರು ತಮಗೆ ವಹಿಸಿದ ಕಾರ್ಯವನ್ನು ಜವಬ್ದಾರಿಯುತವಾಗಿ ನಿರ್ವಹಿಸಿ ದೇಶದ ಆರ್ಥಿಕ ಅಭಿವೃದ್ದಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ನಿವೃತ್ತ ಸಹಾಯಕ ಸಾಂಖಿಕ ಅಧಿಕಾರಿ ಈರಣ್ಣ ಆರ್. ಚಿನ್ನಗುಡಿ ಮಾತನಾಡಿ, ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಷನ್ (ಎನ್.ಎಸ್.ಓ.) ಇದನ್ನು 1985 ರಲ್ಲಿ ಪಿ.ಸಿ. ವiಹಲನೋಬಿಸ್ ಇದರ ಮುಖಾಂತರ ಬಹಳಷ್ಟು ಸಮೀಕ್ಷೆ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಇವರು ನೀಡಿದ ಮಹತ್ತರವಾದ ಕಾರ್ಯಗಳಿಂದ ದೇಶದ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಸಹಾಯಕ ಸಾಂಖಿಕ ಅಧಿಕಾರಿ ಗೀತಾಂಜಿಲಿ ಅವರು ಪಿ.ಸಿ ಮಹಲನೋಬಿಸ್‍ರವರು ಅವರ ಜೀವನ, ಸಾಧನೆ ಮತ್ತು ದೇಶದ ಆರ್ಥಿಕತೆಗೆ ನೀಡಿದ ಕೊಡುಗೆಗಳ ಕುರಿತು ಮಾಹಿತಿಯನ್ನು ನೀಡಿದರು.
ಜಿಲ್ಲಾ ಸಾಂಖ್ಯ ಸಂಗ್ರಹಣಾಧಿಕಾರಿ ಜಯಶ್ರೀ ಕರಜಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಪ್ರಭಾರ ಸಹಾಯಕ ನಿರ್ದೇಶಕ ದಾದ ಗೌಡ, ಸಹಾಯಕ ಸಾಂಖಿಕ ಅಧಿಕಾರಿ ನೀಲಮ್ಮ ಶರಣ ವಳಕೇರಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ಆಳಂದ ತಾಲೂಕಿನ ಗಣತಿದಾರ ಪರಶುರಾಮ ಎಸ್.ದಶವಂತ ವಂದಿಸಿದ್ದರು. ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಭಾಗವಹಿಸಿದ್ದರು.