
ಲಕ್ಷೆ÷್ಮÃಶ್ವರ.ಜ.೧೧: ಲಕ್ಷೆ÷್ಮÃಶ್ವರ ಸಮೀಪದ ಹೂವಿನ ಶಿಗ್ಲಿ ಗ್ರಾಮದ ಶ್ರೀ ವೀರಕ್ತಮಠದ ೪೭ ನೇ ಜಾತ್ರಾ ಮಹೋತ್ಸದ ಅಂಗವಾಗಿ ಶನಿವಾರ ಗ್ರಾಮದಲ್ಲಿ ಪೂರ್ವಭಾವಿಯಾಗಿ ರೂಟ್ಟಿ ಜಾತ್ರೆ ಜರುಗಿತು.
ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಕುಂದಗೋಳದ ಕಲ್ಯಾಣ ಪುರದ ಬಸವಣ್ಣಜ್ಜರವರು ಬಟಕುರ್ಗಿಯ ಗದಗಯ್ಯ ದೇವರು ಸಾನಿಧ್ಯದಲ್ಲಿ ಗ್ರಾಮದಲ್ಲಿ ಮಹಿಳೆಯರು ಮತ್ತು ಚಕ್ಕಡಿಗಳಲ್ಲಿ ಶ್ರೀ ಮಠದ ಜಾತ್ರೆಗಾಗಿಯೇ ಮಾಡ ಇಟ್ಟ ರೊಟ್ಟಿಗಳನ್ನು ಬುಟ್ಟಿಗಳಲ್ಲಿ ತುಂಬಿ ಬಿಳಿಯ ಅರಬಿ ಹೊದಕೆ ಹಾಕಿ ಶ್ರೀಗಳ ಆರ್ಶೀವಾದದೊಂದಿಗೆ ರೊಟ್ಟಿಗಳನ್ನು ಚಕ್ಕಡಿಗಳಲ್ಲಿ ಹಾಕುತ್ತಿದ್ದ ದೃಶ್ಯ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯನ್ನು ನೆನಪಿಸುವಂತಿತ್ತು.
ರೊಟ್ಟಿ ಜಾತ್ರೆಯಲ್ಲಿ ಅನ್ನಧಾನ್ಯನವರು ಹೀರೇಮಠ ನಿಂಗಪ್ಪ ಹೊಸೂರು ಆರ್ ಎಸ್ ಪಾಟೀಲ್ ಮಹಾದೇವಪ್ಪ ಬಿಸಟ್ಟನವರ ನಿಂಗಪ್ಪ ಕಳ್ಳಿಮನಿ ಪಿ ಎಚ್ ಪಾಟೀಲ್ ಶಿವಲಿಂಗಯ್ಯ ಹಿರೇಮಠ ಮಹಾಲಿಂಗಪ್ಪ ಅಡರಕಟ್ಟಿ ವೀರೂಪಾಕ್ಷಪ್ಪ ಚೂರಿ ಯೋಗಪ್ಪ ಕುಂದರಗಿ ನಿಂಗಪ್ಪ ರಾಯಣ್ಣವರ ಮಲ್ಲಪ್ಪ ಯಳವಂಕಿ ದೇವಪ್ಪ ಕೃಷ್ಣ ಬಿದರಳ್ಳಿ ಸೇರಿದಂತೆ ಶ್ರೀಮಠದ ನೂರಾರು ಭಕ್ತರು Ä ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಕೋಮು ಸೌಹಾರ್ದತೆ ಮೆರೆದ ಮುಸ್ಲಿ ಭಕ್ತರು
ಸಮೀಪದ ಹೂವಿನ ಶಿಗ್ಲಿ ಗ್ರಾಮದಲ್ಲಿ ಶನಿವಾರ ಇಡೀ ಗ್ರಾಮ ವೀರಕ್ತಮಠದ ಜಾತ್ರಾ ಮಹೋತ್ಸವದ ಅಂಗವಾಗಿ ರೊಟ್ಟಿ ಜಾತ್ರೆಯ ಸಂಭ್ರಮದಲ್ಲಿ ಇತ್ತು ಇಡಿ ಗ್ರಾಮದಲ್ಲಿ ಜಾತಿ ಧರ್ಮ ಎನ್ನದೆ ಎಲ್ಲರೂ ಭಕ್ತಿಭಾವದಿಂದ ರೊಟ್ಟಿಗಳನ್ನು ನೀಡುತ್ತಿದ್ದರು.
ಈ ಗ್ರಾಮದಲ್ಲಿ ನಾಲ್ಕೆöÊದು ಮುಸ್ಲಿ ಕುಟುಂಬಗಳಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಮುಸ್ಲಿ ಕುಟುಂಬುಗಳು ಶ್ರಧ್ಧಾಭಕ್ತಿಯಿಂದ ರೊಟ್ಟಿ ಕಾಣಿಕೆಗಳನ್ನು ನೀಡಿ ಕೋಮು ಸೌಹಾರ್ದತೆಯನ್ನು ಮೆರೆದರು.

























