
ಕೆಂಗೇರಿ:ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿ ವಾರ್ಡಿನ ದೊಡ್ಡಗೊಲ್ಲರಹಟ್ಟಿ ಬಡಾವಣೆಯಲ್ಲಿ ಜಿಬಿಎ ಇಲಾಖೆ ವತಿಯಿಂದ ಕೊರೆದಿರುವ ಕುಡಿಯುವ ನೀರಿನ ಬೋರ್ವೆಲ್ ಅನ್ನು ಶಾಸಕ ಎಸ್. ಟಿ. ಸೋಮಶೇಖರ್ ಉದ್ಘಾಟಿಸಿದರು. ನಾಗದೇವನಹಳ್ಳಿ ವಾರ್ಡಿನ ಕಾಂಗ್ರೆಸ್ ಮುಖಂಡ ದೇವರಾಜ್, ಕೆಂಗಲ್ ಹನುಮಂತಯ್ಯ ವಾರ್ಡಿನ ಕಾಂಗ್ರೆಸ್ ಮುಖಂಡ ಚೇತನ್ ಗೌಡ, ಗೌರೀಶ್, ನಾಗದೇವನಹಳ್ಳಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಗೌಡ, ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್ ಗೌಡ, ವಿನೋದ್, ಹಾಗೂ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

























