
ಕಲಬುರಗಿ,ಜ.8: ಅಳಂದ ತಾಲೂಕಿನ ಕೆರೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಹುಂಡಿ ಕದ್ದ ನಾಲ್ವರು ಆರೋಪಿಗಳನ್ನು ಮಾದನ ಹಿಪ್ಪರಗಾ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 31,200 ರೂ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆರೂರು ಗ್ರಾಮದ ವೀರೇಶ ಪರಮೇಶ್ವರ ಬ್ಯಾಗೆಳಿ,ಗಣಪತಿ ನಾಗಪ್ಪ ಉದ್ದನಶೆಟ್ಟಿ, ಲಾಡಪ್ಪ ಶರಣಪ್ಪ ಚನಗೊಂಡ ಮತ್ತು ಅನಿಲಕುಮಾರ ಶ್ರೀಶೈಲ ಕೊಂಕಾಟೆ ಬಂಧಿತರು.
ಕಳೆದ 2025 ರ ಏಪ್ರಿಲ್ 25 ರಂದು ರಾತ್ರಿ ಕೆರೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿದ್ದ 90 ಸಾವಿರ ಕಾಣಿಕೆ ಹಣ ಕಳುವಾಗಿತ್ತು. ಮತ್ತೆ 2025 ರ ನವೆಂಬರ್ 4 ರಂದು ಇದೇ ದೇವಸ್ಥಾನ ಕಳ್ಳತನ ಪ್ರಯತ್ನ ನಡೆದಿತ್ತು.
ಹುಂಡಿ ಕಳ್ಳತನ ಪ್ರಕರಣ ಪತ್ತೆಗೆ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ ,ಡಿಎಸ್ಪಿ ತಮ್ಮಾರಾಯ ಪಾಟೀಲ, ಅಳಂದ ಪಿಐ ಶರಣಬಸಪ್ಪ ಕೋಡ್ಲಾ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಸವಿತಾ ಮತ್ತು ಸಿಬ್ಬಂದಿಯವರು ಮಾದನ ಹಿಪ್ಪರಗಾ ಹತ್ತಿರ ಆರೋಪಿಗಳನ್ನು ಬಂಧಿಸುವಲ್ಲಿ ಯಶ ಸಾಧಿಸಿದ್ದಾರೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ತಿಳಿಸಿದರು.

























