ತೆಲಂಗಾಣ ಸ್ಫೋಟ: ಸತ್ತವರ ಸಂಖ್ಯೆ ೩೫

ಹೈದರಾಬಾದ್, ಜು.೧- ತೆಲಂಗಾಣ ಔಷಧ ತಯಾರಿಕಾ ಘಟಕದಲ್ಲಿ ಸ್ಪೋಟ ಸಂಭವಿಸಿ ಮೃತಪಟ್ಟವರ ಸಂಖ್ಯೆ ೩೫ಕ್ಕೆ ಏರಿಕೆಯಾಗಿದ್ದು ಅವಶೇಷಗಳ ಅಡಿಯಲ್ಲಿ ಇನ್ನೂ ಹೆಚ್ಚಿನ ಶವಗಳು ಇರಬಹುದು, ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ರಿಯಾಕ್ಟರ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೩೫ ಕ್ಕೆ ಏರಿಕೆಯಾಗಿದ್ದು ರಕ್ಷಣಾ ಕಾರ್ಯ ಮುಂದುವರೆದಿದ್ದು, ರಾಜ್ಯ ಸರ್ಕಾರ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ

ಔಷಧ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೩೫ ಕ್ಕೆ ಏರಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ, ಅವಶೇಷಗಳಡಿ ಇನ್ನೂ ಹಲವರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ

ಪಶಮೈಲಾರಂನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಪ್ಲಾಂಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೩೫ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ದೃಢಪಡಿಸಿದ್ದಾರೆ.

“ಅವಶೇಷಗಳನ್ನು ತೆಗೆದುನಹಾಕುವಾಗ ಹಲವಾರು ಶವಗಳು ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿವೆ. ಈವರೆಗೆ ೩೧ ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತ ಮುಂದುವರೆದಿದೆ” ಎಂದು ಹೇಳಿದ್ದಾರೆ

ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮತ್ತು ಅವರ ಕೆಲವು ಸಂಪುಟ ಸದಸ್ಯರು ಸ್ಫೋಟ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ಧಾರೆ.

ಆರೋಗ್ಯ ಸಚಿವ ಸಿ ದಾಮೋದರ್ ರಾಜನರಸಿಂಹ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಅಗತ್ಯವಿರುವ ಎಲ್ಲಾ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ

ರಿಯಾಕ್ಟರ್‍ನೊಳಗಿನ ರಾಸಾಯನಿಕ ಕ್ರಿಯೆಯಿಂದ ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಉಂಟಾದ ಸ್ಫೋಟದಿಂದ ಕೈಗಾರಿಕಾ ಶೆಡ್ ಬೆಂಕಿಗೆ ಆಹುತಿಯಾಗಿದೆ. ಸ್ಪೋಟದ ರಭಸಕ್ಕೆ ಕಾರ್ಮಿಕರನ್ನು ಹಲವಾರು ಅಡಿಗಳಷ್ಟು ದೂರ ಎಸೆದಿತ್ತು ಎಂದು ಪ್ರತ್ಯಕ್ಷದಶಿಗಳು ತಿಳಿಸಿದ್ದಾರೆ

ಮಿಯಾಪುರದ ಪ್ರಣಾಮ್ ಆಸ್ಪತ್ರೆಯಲ್ಲಿ ಸುಟ್ಟಗಾಯಗಳು ಮತ್ತು ತಲೆಗೆ ಗಾಯಗಳೊಂದಿಗೆ ೨೧ ರೋಗಿಗಳನ್ನು ದಾಖಲು ಮಾಡಲಾಇದೆ. ಅದರಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ

ಪತಂಚೇರುವಿನ ಧ್ರುವ ಆಸ್ಪತ್ರೆಗಳು ೧೧ ರೋಗಿಗಳನ್ನು ದಾಖಲಿಸಿದ್ದು, ಅವರಲ್ಲಿ ಇಬ್ಬರನ್ನು ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಇದೆ. ಉಳಿದ ಒಂಬತ್ತರಲ್ಲಿ ಐದು ಮಂದಿ ವೆಂಟಿಲೇಟರ್‍ಗಳಲ್ಲಿದ್ದಾರೆ. ಏಳು ಮೃತದೇಹಗಳು ಶೇ. ೪೦ ರಿಂದ ೮೦ ರಷ್ಟು ಸುಟ್ಟಗಾಯಗಳಾಗಿದ್ದರೆ, ಇಬ್ಬರ ದೇಹಗಳು ಶೇ. ೧೦ ರಷ್ಟು ಸುಟ್ಟಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ