
ಯಡ್ರಾಮಿ: ಸೆ.7:ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಹಾಗೂ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಪತ್ರಕರ್ತ ಯಾವಾಗಲು ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಎಂದು ಸೊನ್ನ ಪದವಿ ಪೂರ್ವ ಕಾಲೇಜು ಉಪನ್ಯಾಸಕ ನಿಜಲಿಂಗ ದೊಡಮನಿ ಅಭಿಪ್ರಾಯಪಟ್ಟರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಬೆಂಗಳೂರು ಯಡ್ರಾಮಿ ತಾಲ್ಲೂಕು ಘಟಕ ಅಧ್ಯಕ್ಷ ಮಡಿವಾಳಪ್ಪ ಟಿ ಯತ್ನಾಳ ನೇತೃತ್ವದಲ್ಲಿ ಪಟ್ಟಣದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತರು ತಮ್ಮ ಪತ್ರಿಕೆ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ಜಗತ್ತಿನ ಆಗು ಹೋಗುವ ಪ್ರಚಲಿತ ಮಾಹಿತಿಯನ್ನು ಒದಗಿಸಿ ಕೊಡುತ್ತಾರೆ. ಇಂದಿನ ಹೆಚ್ಚುತ್ತಿರುವ ತಂತ್ರಜ್ಞಾನ ಯುಗದಲ್ಲಿ ಜನರು ಪತ್ರಿಕೆ ಓದುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಜ್ಞಾನ ಕುಂಠಿತವಾಗುತ್ತದೆ. ಅದಕ್ಕೆ ಪತ್ರಿಕೆಯನ್ನು ಖರೀದಿಸಿ ಓದುವಂತೆ ಮನವಿ ಮಾಡಿದರು. ಇವತ್ತು ಪತ್ರಕರ್ತರೆಲ್ಲರು ಸೇರಿ ಉತ್ತಮ ಸಮಾಜ ಸೇವಾ ಪ್ರಶಸ್ತಿ, ಉತ್ತಮ ಹೋರಾಟಗಾರ ಪ್ರಶಸ್ತಿ, ಮಾಧ್ಯಮ ರತ್ನ ಪ್ರಶಸ್ತಿ, ನಿವೃತ್ತಿ ಶಿಕ್ಷಕರಿಗೆ ವಿಶೇಷ ಸನ್ಮಾನ ಏರ್ಪಡಿಸಿರುವುದು ಅತ್ಯಂತ ಮೆಚ್ಚುಗೆಯ ಕೆಲಸವಾಗಿದೆ ಎಂದರು.
ಈ ವೇಳೆ ಕಡಕೋಳ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಕರ್ನಾಟಕ ಜನರ್ಲಿಸ್ಟ್ ಯೂನಿಯನ್ ಯಾದಗಿರಿ ಜಿಲ್ಲಾ ಈರಣ್ಣ ಹೊಸಮನಿ, ಪಿಎಲ್ ಡಿ ಬ್ಯಾಂಕ್ ಜೇವರ್ಗಿ ನಿರ್ದೇಶಕರು ಬಸವರಾಜ ಹೂಗಾರ, ಪಶು ವೈಧ್ಯಾಧಿಕಾರಿಗಳು ಪ್ರಭು ಕಲ್ಲೂರ, ಗುರಣ್ಣ ಕಾಚಾಪೂರ,ನಾಗಣ್ಣ ಹಾಗರಗುಂಡಗಿ ಯಡ್ರಾಮಿ, ಹಯ್ಯಾಳಪ್ಪ ಗಂಗಾಕರ್,ಕರ್ನಾಟಕ ಸರ್ಕಾರಿ ನೌಕರ ಸಂಘದ ಯಡ್ರಾಮಿ ತಾಲ್ಲೂಕು ಅಧ್ಯಕ್ಷರು ಶಿವಕುಮಾರ ಡಂಬಳ, ಸಿ ಆರ್ ಸಿ ಯಡ್ರಾಮಿ ಕ್ಲಸ್ಟರ ಮಲ್ಲನಗೌಡ,ಅಲ್ಲಾಪಟೇಲ ಮಾಲಿಬಿರಾದಾರ, ಇಜೇರಿ ಮುಖ್ಯ ಗುರುಗಳು ಕುಸ್ತಿ ಪ್ರೌಡ ಶಾಲೆ ಅಲ್ಲಾ ಪಟೇಲ್ ಚಿಂಚೋಳಿ,ಮುಖ್ಯ ಗುರುಗಳು ಕೆ.ಪಿ.ಎಸ್.ಸಿ ಯಡ್ರಾಮಿ ಬಸವರಾಜ ಪಾಟೀಲ ಯತ್ನಾಳ,ನಿವೃತ್ತ ಶಿಕ್ಷಕರಾದ ಮಹಾತೇಂಶ ಗಂಗಾಕರ್, ಮಲ್ಕಜಪ್ಪ ಜಂಬಗಿ,ಕೇಸು ನಾನು ಪವರ್,ಸೈಯದ್ ಹುಸೇನ್ ಮುಲ್ಲಾ ಹಂಗರಗಿ,ಮುಖ್ಯ ಗುರುಗಳು ಕುಕನೂರ ಕೃಷ್ಣಾಬಾಯಿ,ವಿಶ್ವನಾಥ ಮಾಗಣಗೇರಿ, ಅಮೀರ ಪಟೇಲ್ ಚಿಂಚೋಳಿ,ದೇವಿಂದ್ರಪ್ಪಗೌಡ ಪಾಟೀಲ,ಬಸವರಾಜ ಹೂಗಾರ,ಶಪೀಉಲ್ಲಾ ದಖನಿ, ಅಪೆÇ್ರೀಜ ಅತ್ನೂರ,ಲಾಳೇಸಾಬ ಮನಿಯಾರ, ಪರಮೇಶ್ವರ ನಾಯಕ,ವಿಠ್ಠಲ ಚೌಡಕಿ ಇತರ ಪತ್ರಕರ್ತರು ಹಾಗೂ ಸಂಘಟನಾ ಸದಸ್ಯರು ಇತರರು ಪಾಲ್ಗೊಂಡರು.
ಭ್ರಷ್ಟಾಚಾರ ಬಗ್ಗೆ ದ್ವನಿ ಎತ್ತು ಎದೆಗಾರಿಕೆ ಜನರಿಗೆ ಇಲ್ಲ ಎನಾದ್ರು ಇದ್ರೆ ಅದು ಸ್ವಾಮಿಗಳಲ್ಲಿ ಮತ್ತು ಪತ್ರಕರ್ತರಲ್ಲಿ ಮಾತ್ರ ಉಳಿದುಕೊಂಡಿದೆ.
—-ಪೂಜ್ಯ ರುದ್ರಮುನಿ ಶಿವಾಚಾರ್ಯರು ಮಹಾಸ್ವಾಮಿಗಳು ಮಹಾಮಠ ಕಡಕೋಳ.
ಈ ದೇಶದಲ್ಲಿ ಪತ್ರಕರ್ತ ಹಾಗೂ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು ಅವರನ್ನು ಸತ್ಕಾರ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
—-ಪೂಜ್ಯ ಸಿದ್ದಲಿಂಗ ಮಾಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ.