ಕಲಬುರಗಿ,ಸೆ.8:ಅಫಜಲಪುರ ಪಟ್ಟಣದ ಬಸವ ಮಂಟಪದಲ್ಲಿ ಭಾರತೀಯ ಬಸವ ಬಳಗ ಬಸವ ಮಾರ್ಗ ಪ್ರತಿಷ್ಠಾನ, ಜಾಗತಿಕ ಲಿಂಗಾಯತ ಮಹಾಸಭಾ ಆಶ್ರಯದಲ್ಲಿ ಶರಣ ಹೂಗಾರ್ ಮಾದಯ್ಯನವರ ಜಯಂತಿ ಕಾರ್ಯಕ್ರಮವನ್ನು ತಾಲೂಕ ಹೂಗಾರ ಸಮಾಜ ಗೌರವಾಧ್ಯಕ್ಷ ರೇವಣಸಿದ್ಧ ಹೂಗಾರ್ ಬಂದರವಾಡ ಸಾ ನೇತೃತ್ವದಲ್ಲಿ ಸಂಭ್ರಮದಿಂದ ನೆರವೇರಿತು
ಕಾರ್ಯಕ್ರಮದ ಸಾನಿಧ್ಯ ಗುರುದೇವ ಶರಣರುಮತ್ತು ಅಧ್ಯಕ್ಷತೆ ಶಿವಾನಂದ ಬಸವಣ್ಣ ನರಣಿ ವಹಿಸಿಕೊಂಡಿದ್ದರು ಉದ್ಘಾಟನೆಯನ್ನು ನೆರವೇರಿಸಿದ ಹೂಗಾರ ಸಮಾಜ ಜಿಲ್ಲಾಧ್ಯಕ್ಷ ಪ್ರಕಾಶ್ ಪುಲಾರಿಯವರು ಮಾತನಾಡಿ ಶರಣರ ಚಿಂತನೆಗಳು ಅಳವಡಿಸಿಕೊಂಡು ಹೋಗಬೇಕು ಸಮಾಜದಲ್ಲಿ ಇನ್ನೂ ಹಲವಾರು ತೊಂದರೆಗಳಿವೆ ಸರಕಾರ ಸ್ಪಂದಿಸಬೇಕು ಎಂದರು. ರವಿಚಂದ್ರ,ಸಂತೋಷ್ ಹೂಗಾರ ಮಾತನಾಡಿದರು. ಮುಖ್ಯ ಅತಿಥಿಯಾಗಿ ಕಬ್ಬು ಬೆಳೆಗಾರ ಸಂಘದಜಿಲ್ಲಾಧ್ಯಕ್ಷ ರಮೇಶ್ ಹೂಗಾರ್ ಅವರು ಮಾತನಾಡಿ ಸಮಾಜದಲ್ಲಿ ಹಲವಾರು ರೀತಿಯ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಹೂಗಾರ ಸಮಾಜ ಹಿಂದುಳಿದ ಸಮಾಜವಾಗಿದೆ ಆದಕಾರಣ ಸರ್ಕಾರ ಸಮಾಜವನ್ನು ಗುರುತಿಸಿ ಎಲ್ಲಾ ಶರಣರಿಗೆ ಗೌರವ ನೀಡಿದ ಹಾಗೆ 12ನೇ ಶತಮಾನದ ಶರಣರಲ್ಲಿಯೇ ಬಸವಣ್ಣನವರಿಗೆ ಪ್ರಿಯವಾದ ಲಿಂಗಪೂಜಿಗೆ ದಿನನಿತ್ಯ ಹೂ ಪತ್ರಿಯನ್ನು ತಲುಪಿಸುತ್ತಾ ಕಾಯಕ ನಿಷ್ಠೆಗೆ ಹೆಸರಾದ ಶರಣ ಹೂಗಾರ ಮಾದಯ್ಯನವರ ಜಯಂತಿ ಕೂಡ ಸರ್ಕಾರದಿಂದ ಆಚರಿಸಿ ಅವರಿಗೆ ಗೌರವ ತಂದು ಕೊಡಬೇಕೆಂದು ಒತ್ತಾಯಿಸುತ್ತಾ ಹೂಗಾರ್ ಅಭಿವೃದ್ಧಿ ನಿಗಮ ಮಂಡಳಿ ಅನುಷ್ಠಾನಕ್ಕೆ ತಂದು ನಿಗಮ ಮಂಡಳಿಗೆ ಆರ್ಥಿಕ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.
ಗುರಪ್ಪ ಬಸವರಾಜ್ ಚಾಂದಕವಟೆ ನಿರೂಪಿಸಿದರು. ಅಮೃತ ಗೌಡ ಪಾಟೀಲ ವಂದಿಸಿದರು.ಕಾರ್ಯಕ್ರಮದಲ್ಲಿ ಮೃತ್ಯುಂಜಯ ಕಳ್ಳಿಮಠ ಸಂಗೀತ ಕಾರ್ಯಕ್ರಮ ನೆರವೇರಿಸಿದರು.ಹೂಗಾರ್ ಸಮಾಜ ತಾಲೂಕ ಅಧ್ಯಕ್ಷ ಮಡಿವಾಳ ಹೂಗಾರ್,ಸಿದ್ದನಗೌಡ ಮಾಲಿಪಾಟೀಲ್ ಸದಾಶಿವ ಮೇತ್ರಿ ಜಗದೇವಪ್ಪ ಅಂಜುಟಿಗಿ ಬಸವರಾಜ್ ಕೆಂಗನಾಳ ಬಾಪು ಗೌಡ್ ಬಿರಾದಾರ್ ಸಾಯ್ಬಣ್ಣ ಹಿಂಚಿಗೇರಿ,ಶ್ರೀಶೈಲ್ ಹೂಗಾರ್ ,ಸಿದ್ದು ಹೂಗಾರ್,ಸಿದ್ದು ಔಟೆ,ಶಿವಾನಂದ ಹೂಗಾರ್ ಸೇರಿ ಹಲವಾರು ಭಾಗವಹಿಸಿದ್ದರು

























