Home ಜಿಲ್ಲೆ ಸುರಪುರ:ಯುಜಿಡಿ ಒಳಚರಂಡಿ,ಕಕ್ಕೇರಾ:ವಸತಿ ಸಹಿತ ಪದವಿ ಕಾಲೇಜು ಮತ್ತು ಪೊಲೀಸ್ ಠಾಣೆ ನಿರ್ಮಾಣಕ್ಕೂ ಈ ಬಾರಿಯ ಬಜೆಟ್...

ಸುರಪುರ:ಯುಜಿಡಿ ಒಳಚರಂಡಿ,ಕಕ್ಕೇರಾ:ವಸತಿ ಸಹಿತ ಪದವಿ ಕಾಲೇಜು ಮತ್ತು ಪೊಲೀಸ್ ಠಾಣೆ ನಿರ್ಮಾಣಕ್ಕೂ ಈ ಬಾರಿಯ ಬಜೆಟ್ ಘೋಷಣೆ

ಸುರಪುರ: ಮಾ.೮:ನಮ್ಮ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷೇತ್ರದ ಅಭಿವೃದ್ಧಿಗೆ ನೆರವಾಗುತ್ತಿದ್ದು ಮುಖ್ಯಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಗೃಹ ಸಚಿವ ಜಿ.ಪರಮೇಶ್ವರ ಅವರಿಗೂ ನನ್ನ ಹಾಗೂ ಕ್ಷೇತ್ರದ ಜನತೆ ಪರವಾಗಿ ಧನ್ಯವಾದಗಳು ಸಲ್ಲಿಸುವುದಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಅವರು ಹುಣಸಗಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಕೂಡ ಅನುದಾನದ ಭರವಸೆ ನೀಡಿದ್ದಾರೆ ಈಗ ಯುಜಿಡಿ ಅಡಿಯಲ್ಲಿ ಸುರಪುರ ನಗರದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಹಾಗೂ ಕಕ್ಕೇರಾ ಪಟ್ಟಣದಲ್ಲಿ ವಸತಿ ಸಹಿತ ಪದವಿ ಕಾಲೇಜು ಮತ್ತು ಪೊಲೀಸ್ ಠಾಣೆ ನಿರ್ಮಾಣಕ್ಕೂ ಈಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಅಲ್ಲದೆ ಶೈಕ್ಷಣಿಕ ಅಭಿವೃದ್ಧಿಗಾಗಿ ಮೌಲಾನ ಅಬ್ದುಲ್ ಕಲಾಂ ಶಾಲೆಗಳು ಅನೇಕ ಕೊಡುಗೆಗಳನ್ನು ನಮ್ಮ ಸರ್ಕಾರ ನೀಡಿದೆ.ಇದು ನಮ್ಮತಂದೆ ರಾಜಾ ವೆಂಕಟಪ್ಪ ನಾಯಕ ಅವರ ಕನಸಾಗಿತ್ತು.ಈಗ ನೆರವೇರುತ್ತಿದ್ದು ಅದಕ್ಕಾಗಿ ನನ್ನ ಪರವಾಗಿ ಮತ್ತು ಕ್ಷೇತ್ರದ ಎಲ್ಲ ಜನತೆಯ ಪರವಾಗಿ ಧನ್ಯವಾದವನ್ನು ಸಲ್ಲಿಸುತ್ತಿರುವುದಾಗಿ ಇದಕ್ಕೆ ಕ್ಷೇತ್ರದ ಮುಖಂಡರು, ಜನರು ಸಹಕಾರ ನೀಡಿದ್ದು ಜನರಿಗೂ ಧನ್ಯವಾದ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ ಮಾತನಾಡಿ, ಕ್ಷೇತ್ರದ ಜನತೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸರ್ಕಾರಕ್ಕೆ ಜೊತೆಗೆ ವಿಶೇಷವಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೂ ಧನ್ಯವಾದಗಳು ಸಲ್ಲಿಸುತ್ತೇವೆ. ಈ ಎಲ್ಲ ಯೋಜನೆಗಳನ್ನು ತರಲು ಮುಖ್ಯಮಂತ್ರಿಗಳ ಬಳಿ ಸಚಿವರ ಬಳಿ ತಮ್ಮ ಶಾಸಕರು ನಿರಂತರವಾಗಿ ಸಂಪರ್ಕಿಸಿ ಯೋಜನೆಗಳನ್ನು ತರಲು ಬಹಳ ಶ್ರಮ ವಹಿಸಿದ್ದಾರೆ ಅದಕ್ಕಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಮುಖಂಡರಾದ ವೆಂಕೋಬ ಯಾದವ್, ಮಲ್ಲಣ್ಣ ಸಾಹುಕಾರ್, ಪ್ರಕಾಶ ಗುತ್ತೇದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.