Home ಜಿಲ್ಲೆ ಕಲಬುರಗಿ ಗ್ರಾ.ಪಂ.ನೌಕರರ ಹೋರಾಟಕ್ಕೆ ಬೆಂಬಲ

ಗ್ರಾ.ಪಂ.ನೌಕರರ ಹೋರಾಟಕ್ಕೆ ಬೆಂಬಲ

ಕಲಬುರಗಿ,ಮಾ.10-ಗ್ರಾಮ ಪಂಚಾಯತಿ ನೌಕರರ ಸಂಘ ಸಿಐಟಿಯು ಸಂಯೋಜಿತ ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆಸುತ್ತಿರುವ ಅನಿರ್ಧಿಷ್ಟ ಹೋರಾಟಕ್ಕೆ ಆಗಮಿಸಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ಭಗವಂತರಾಯ ಮುರಾಡಿ ರವರು ಮಾತನಾಡಿ ಗ್ರಾ.ಪಂ.ನೌಕರರ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ ಬೇಡಿಕೆಗಳು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ ಅಧಿಕಾರಿಗಳು ಗಮನ ಹರಿಸಿ ಶೀಘ್ರದಲ್ಲೇ ಪರಿಹರಿಸಬೇಕು ಬೇಡಿಕೆಗಳು ಈಡೇರಿಸುವ ವರೆಗೂ ನಡೆಯುವ ಹೋರಾಟಕ್ಕೆ ನಮ್ಮ ಸಂಘದ ಹಾಗೂ ಆರ್‍ಡಿಪಿಆರ್ ಕುಟುಂಬದ ಎಲ್ಲಾ ಸಂಘಗಳ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.
ಈ ಹೋರಾಟಕ್ಕೆ ಬೆಂಬಲವಾಗಿ ಪಿಡಿಒ ಸಂಘದ ರಾಜ್ಯ ಉಪಾಧ್ಯಕ್ಷರಾದ ಅನುಪಮಾ, ಕಲ್ಯಾಣ ಕರ್ನಾಟಕ ವಲಯದ ಸಂಘಟನಾ ಕಾರ್ಯದರ್ಶಿ ಅನಿಲ ಮಾನಪಡೆ, ಎಸ್‍ಡಿಎಎ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಯಲಗೊಂಡ ಹಿರೆಕುರಬರ, ಗ್ರೇಡ-1 ಕಾರ್ಯದರ್ಶಿ ಸಂಘದ ಜಿಲ್ಲಾ ಅಧ್ಯಕ್ಷರಾದ ಹಳ್ಳೇರಾಯ ದೇಸಾಯಿ, ಎಸ್‍ಡಿಎಎ ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಕವಲಗಾ ಬಿ ಭಾಗವಹಿಸಿ ಎಲ್ಲಾ ಸಂಘಗಳು ಹೋರಾಟ ಬೆಂಬಲಿಸಿ ಮಾತನಾಡಿದರು.
ಹೋರಾಟಕ್ಕೆ ಬೆಂಬಲ ಘೋಷಣೆ ಮಾಡಿದ ಎಲ್ಲಾ ಸಂಘಗಳ ಪದಾಧಿಕಾರಿಗಳಿಗೆ ಗ್ರಾ.ಪಂ.ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಧನ್ಯವಾದ ತಿಳಿಸಲಾಯಿತು.