Home ಕ್ರೈಂ ಸುದ್ದಿಗಳು 2.5 ಲಕ್ಷಕ್ಕೆ ಸುಫಾರಿ: ತಂದೆಯನ್ನೇ ಕೊಲೆಗೈಯಿಸಿದ ಪುತ್ರ : 5 ಮಂದಿ ಬಂಧನ

2.5 ಲಕ್ಷಕ್ಕೆ ಸುಫಾರಿ: ತಂದೆಯನ್ನೇ ಕೊಲೆಗೈಯಿಸಿದ ಪುತ್ರ : 5 ಮಂದಿ ಬಂಧನ

ಯಾದಗಿರಿ: ಮಾ.21:ಜಿಲ್ಲೆಯ ವಡಿಗೇರಾ ತಾಲೂಕಿನ ಗೋನಾಲ ಗ್ರಾಮದಲ್ಲಿ ಮಾನವೀಯ ಮೌಲ್ಯಗಳನ್ನು ನಡುಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಪುತ್ರನೇ ತನ್ನ ತಂದೆಯನ್ನು ಸುಫಾರಿ ನೀಡಿ ಕೊಲೆಗೈಯಿಸಿದ ದಾರುಣ ಘಟನೆ ಇದೀಗ ಪೆÇಲೀಸರ ತನಿಖೆಯಿಂದ ಬಹಿರಂಗವಾಗಿದೆ.

ಮೃತ ಹಂಪಣ್ಣ ಸಜ್ಜನ್ ಅವರನ್ನು ಕೊಲೆಗೈಯಿಸಲು ಮಗ ನರಸರೆಡ್ಡಿ 2.50 ಲಕ್ಷಕ್ಕೆ ಆಂಧ್ರ ಪ್ರದೇಶ ಮೂಲದ ನಾಲ್ವರಿಗೆ ಸುಫಾರಿ ನೀಡಿದ್ದನು ಎಂದು ತಿಳಿದುಬಂದಿದೆ. ಮಾರ್ಚ್ 12ರಂದು ಈ ಕೃತ್ಯ ನಡೆದಿದ್ದು, ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದರು.

ಘಟನೆಯ ಸುಳಿವು ಸಿಕ್ಕ ತಕ್ಷಣ ಕಾರ್ಯಾಚರಣೆ ಕೈಗೊಂಡ ಪೆÇಲೀಸರು ನರಸರೆಡ್ಡಿ ಸೇರಿ ಒಟ್ಟು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ವೈಯಕ್ತಿಕ ದ್ವೇಷ ಹಾಗೂ ಜಮೀನು ಹಂಚಿಕೆ ವಿಚಾರವೇ ಕೊಲೆಗೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ.

ಇದೇ ವೇಳೆ, ಮೃತ ಹಂಪಣ್ಣ ಅವರ ಜೀವನ ಶೈಲಿ ಹಾಗೂ ಕುಟುಂಬದ ಒಳಜಗಳವೂ ಈ ದಾರುಣ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ವಡಗೇರಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.