Home ಜಿಲ್ಲೆ ಕಲಬುರಗಿ ಶ್ರೀರಾಮ ಜನನೋತ್ಸವ ಸಂಭ್ರಮ:ಭವ್ಯ ಪಾರಾಯಣ, ರಾಮನಾಮ ಜಪದ ಘೋಷ

ಶ್ರೀರಾಮ ಜನನೋತ್ಸವ ಸಂಭ್ರಮ:ಭವ್ಯ ಪಾರಾಯಣ, ರಾಮನಾಮ ಜಪದ ಘೋಷ

ಕಲಬುರಗಿ:ಮಾ.26ಚೈತ್ರ ಶುಕ್ಲ ನವಮಿಯ ಅಂಗವಾಗಿ ಗುರುವಾರ (ಮಾರ್ಚ್ 26) ಜೇವರ್ಗಿ ರಸ್ತೆಯ ಶ್ರೀ ಪಾದೂರು ರಾಮಕೃಷ್ಣ ತಂತ್ರಿ ಚಾರಿಟೇಬಲ್ ಟ್ರಸ್ಟ್‍ನ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮನವಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೆಳಿಗ್ಗೆ 8.30ಕ್ಕೆ ಶ್ರೀ ಹಂಸನಾಮಕ ಶ್ರೀ ಲಕ್ಷ್ಮೀನಾರಾಯಣ, ಹರೇ ಶ್ರೀರಾಮ ಹಾಗೂ ಶ್ರೀ ಜೈ ವೀರ ಹನುಮಾನ್ ಪಾರಾಯಣ ಸಂಘಗಳ ವತಿಯಿಂದ ವೆಂಕಟೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಶ್ರೀರಾಮರಕ್ಷಾ ಸ್ತೋತ್ರ ಹಾಗೂ ಶ್ರೀರಾಮನಾಮ ಜಪದೊಂದಿಗೆ ಭವ್ಯ ಪಾರಾಯಣ ಜರುಗಿತು.

ಶ್ರೀರಾಮನವಮಿ ಅಂಗವಾಗಿ ಬೆಳಿಗ್ಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ನೆರವೇರಿಸಲಾಯಿತು.

ನಂತರ ಮಹಾಪೂಜೆ ಮತ್ತು ಶ್ರೀರಾಮ ಜನನ ತೊಟ್ಟಿಲು ಸೇವೆ ಭಕ್ತಿಭಾವದಿಂದ ನಡೆಯಿತು.
ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಶ್ರೀರಂಗ ಪೂಜೆ ನಡೆಯಲಿದೆ.

ಟ್ರಸ್ಟಿನ ಪ್ರಮುಖರಾದ ಕಿಶೋರ್ ದೇಶಪಾಂಡೆ, ಪಾರಾಯಣ ಸಂಘದ ಪ್ರಮುಖರಾದ ನರಸಿಂಗರಾವ್ ಕುಲಕರ್ಣಿ, ಪದ್ಮನಾಭಾಚಾರ್ಯ ಜೋಶಿ, ಜಗನ್ನಾಥಾಚಾರ್ಯ ಸುರೇಶ್ ಕುಲಕರ್ಣಿ, ವಿನೂತ ಜೋಶಿ, ವೆಂಕಟರಾವ್ ಕುಲಕರ್ಣಿ, ಶ್ರೀನಿವಾಸ ಜಾಹಾಗಿರದಾರ, ಆರ್ ಕೆ ಕುಲಕರ್ಣಿ, ಸಂತೋಷ್ ಕುಲಕರ್ಣಿ, ಪ್ರಾಣೇಶ್ ಮುಜುಮದಾರ, ನಿಖಿಲೇಶ್ ನಿಂಬರಗಿಕರ್, ಶಂಕರರಾವ್ ಸಿಂದಗಿಕರ್, ಸಮೀರ್ ಕುಲಕರ್ಣಿ, ಗುರುರಾಜ ಹಾಲಾವಿ, ಅಶ್ವಥನಾರಾಯಣ ಪಾಟಕ್, ವ್ಯವಸ್ಥಾಪಕರಾದ ನಿರಂಜನರಾವ್, ನಾಗರಾಜಾಚಾರ್ಯ, ಗಿರಿಶಾಚಾರ್ಯ ಇತರರಿದ್ದರು.