ಪ್ರತ್ಯೇಕ ಅಪಘಾತ : ಮೂವರ ಸಾವು

ಕಲಬುರಗಿ,ಫೆ.13: ನಗರದ ಹತ್ತಿರ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಬೈಕ್ ಸವಾರರು ಸಾವಿಗೀಡಾಗಿದ್ದಾರೆ.
ಶರಣಸಿರಸಗಿ ಗ್ರಾಮದ ನಾಗದೇವತಾ ಗುಡಿ ಹತ್ತಿರ ಟಂಟಂ- ಬೈಕ್ ಡಿಕ್ಕಿ ಯಾಗಿ ಬೈಕ್ ಸವಾರ ಭೀಮಾಶಂಕರ ಪ್ರಕಾಶ ಶಿವರಾಯಗೋಳ ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಕಾರಾಗೃಹದ ಹತ್ತಿರ ಬೈಕ್ -ಲಾರಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಪ್ರದೀಪ ಮಹಾದೇವ ಸಿಂಧೆ ಎಂಬಾತ ಸಾವೀಗೀಡಾಗಿದ್ದಾರೆ.ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ
ನಗರದ ಅಳಂದ ರಸ್ತೆ ಶಹಜಿಲಾನಿ ಕ್ರಾಸ್ ಹತ್ತಿರ ಬೈಕ್ -ಟಿಪ್ಪರ್ ಅಪಘಾತ ಸಂಭವಿಸಿ ಬೈಕ್ ಸವಾರ ಸಚಿನ್ ಸಾವೀಡಾಗಿದ್ದಾರೆ.ಸಂಚಾರಿ ಠಾಣೆ 2 ರಲ್ಲಿ ಪ್ರಕರಣ ದಾಖಲಾಗಿದೆ