
ಕಲಬುರಗಿ,ಅ.9: ಕೌಶಲ್ಯಾಭಿವೃದ್ಧಿ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಲಬುರಗಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, (ಜಿಟಿಟಿಸಿ) ದಲ್ಲಿ 5ನೇ ಸೇಮಸ್ಟರನಲ್ಲಿ ತರಬೇತಿ ಪಡೆಯುತ್ತಿರುವ ಅಂಕಿತಾ ಅಳಂದ ಅವರು ವಿಶ್ವಕೌಶಲ್ಯ (ಮೆಕಾನಿಕಲ್ ಕ್ಯಾಡ್) ರಾಜ್ಯಮಟ್ಟ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ.
ಅಂಕಿತಾ ಅಳಂದ ಅವರ ಯಶಸ್ಸು ಮತ್ತು ರಾಜ್ಯ ಮಟ್ಟದ ಸಾಧನೆಗಾಗಿ ಜಿಟಿಟಿಸಿ ಕಾಲೇಜಿನ ಪ್ರಾಂಶುಪಾಲರಾದ
ಸುಧಾರಾಣಿ ಎಸ್ ಅಟ್ಟೂರ್, ಅಫಜಲಪುರ್ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ಪ್ರಭುದೇವ ಎಮ್.ಎಸ್, ತರಬೇತಿದಾರ ಅರುಣ ಸೂರ್ಯವಂಶಿ, ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.