Home ಜಿಲ್ಲೆ ಹೂಗಾರ ಸಮಾಜದಿಂದ ಸವಿತಾ ಹೂಗಾರಗೆ ಸನ್ಮಾನ

ಹೂಗಾರ ಸಮಾಜದಿಂದ ಸವಿತಾ ಹೂಗಾರಗೆ ಸನ್ಮಾನ

ಬೀದರ್:ಫೆ.೨೩: ಎಂ.ಟೆಕ್ ಪದವಿಯಲ್ಲಿ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆದ ಸವೀತಾ ಹೂಗಾರ ಅವರನ್ನು ಅಖಿಲ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯ ಹಾಗೂ ಬೀದರ ಜಿಲ್ಲಾ ಘಟಕದಿಂದ ರವಿವಾರ ಸನ್ಮಾನಿಸಲಾಯಿತು.
ನಗರದ ಗುಂಪಾ ಬಡಾವಣೆಯಲ್ಲಿನ ನಿವಾಸಕ್ಕೆ ಭೇಟಿ ನೀಡಿದ ಹೂಗಾರ ಸಮಾಜ ಮುಖಂಡರು, ಇತ್ತೀಚಿನ ದಿನಗಳಲ್ಲಿ ಹೂಗಾರ ಸಮುದಾಯದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡುತ್ತಿರುವುದು ಸಂತಸ ಮೂಡಿಸಿದೆ. ಸವೀತಾ ಹೂಗಾರ ಮದುವೆಯಾಗಿ ಮಕ್ಕಳಾದ ನಂತರವೂ ಸಂಸಾರ ಜೊತೆಗೆ ಉನ್ನತ ಶಿಕ್ಷಣ ಪಡೆದು ಬೆಳಗಾವಿಯ ವಿಟಿಯು ವಿಶ್ವ ವಿದ್ಯಾಯಲದಲ್ಲಿ ನಡೆದ ೨೫ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅವರಿಂದ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ಪಡೆದಿರುವುದು ಹೂಗಾರ ಸಮಾಜ ಅಭಿನಂದೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ರಾಜ್ಯ ಹಾಗೂ ಬೀದರ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ರಾಜ್ಯ ಸಹ ಕಾರ್ಯದರ್ಶಿ ದುರ್ಯೂಧನ ಹೂಗಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ, ಬೀದರ ಜಿಲ್ಲಾಧ್ಯಕ್ಷರಾದ ರಾಜಕುಮಾರ ಹೂಗಾರ, ರಾಜ್ಯ ಕಮಿಟಿ ಸದಸ್ಯ ಕಾಶಿನಾಥ ಹೂಗಾರ, ಬಸವಕಲ್ಯಾಣ ಅಧ್ಯಕ್ಷ ವಿಠಲರಾವ ಹೂಗಾರ ಇದ್ದರು.