Home ಜಿಲ್ಲೆ ಕಲಬುರಗಿ ಸ್ಫೂರ್ತಿ ಬೆಣ್ಣೂರಗೆ ಸಂಗೀತ ಕಲಾರತ್ನ ಪ್ರಶಸ್ತಿ

ಸ್ಫೂರ್ತಿ ಬೆಣ್ಣೂರಗೆ ಸಂಗೀತ ಕಲಾರತ್ನ ಪ್ರಶಸ್ತಿ

ಜೇವರಗಿ,ಏ 7: ಬೆಳಕು ಟ್ರಸ್ಟ್ ವತಿಯಿಂದ ಮೇ. 9ರಂದು ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಗಡಿನಾಡು ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಈ ಸಮ್ಮೇಳನದಲ್ಲಿ ಚನ್ನೂರ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಜೇವರ್ಗಿಯ ಸ್ಫೂರ್ತಿ ಭಗವಂತರಾಯ ಬೆಣ್ಣೂರಗೆ ಪ್ರತಿಷ್ಠಿತ ಸಂಗೀತ ಕಲಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಪ್ಪನ ಗೌಡ ಮೇಟಿ ತಿಳಿಸಿದ್ದಾರೆ.